ADVERTISEMENT

ಕೆನರಾ ಬ್ಯಾಂಕ್ ಲಾಭ ಶೇ 75ರಷ್ಟು ಏರಿಕೆ

ಪಿಟಿಐ
Published 24 ಜುಲೈ 2023, 14:11 IST
Last Updated 24 ಜುಲೈ 2023, 14:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೆನರಾ ಬ್ಯಾಂಕ್‌ನ ಜೂನ್‌ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇಕಡ 75ರಷ್ಟು ಏರಿಕೆ ದಾಖಲಾಗಿದೆ. ಜೂನ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಲಾಭವು ₹3,535 ಕೋಟಿ ಆಗಿದೆ. ಅಲ್ಲದೆ, ಬ್ಯಾಂಕ್‌ನ ಎನ್‌ಪಿಎ ಪ್ರಮಾಣ ಕಡಿಮೆ ಆಗಿದೆ, ಬಡ್ಡಿ ವರಮಾನವು ಹೆಚ್ಚಾಗಿದೆ.

ಕೆನರಾ ಬ್ಯಾಂಕ್‌ ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ₹2,022 ಕೋಟಿ ಲಾಭ ಗಳಿಸಿತ್ತು. ಈ ವರ್ಷದ ಜೂನ್ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟು ವರಮಾನವು ₹29,828 ಕೋಟಿಗೆ ಏರಿಕೆ ಆಗಿದೆ.

ಬ್ಯಾಂಕ್‌ನ ನಿವ್ವಳ ಎನ್‌ಪಿಎ ಪ್ರಮಾಣವು ಶೇ 1.57ಕ್ಕೆ ಇಳಿಕೆಯಾಗಿದೆ. ಇದು ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ಶೇ 2.48ರಷ್ಟು ಇತ್ತು. ಎನ್‌ಪಿಎ ಕಡಿಮೆ ಆಗಿರುವ ಕಾರಣದಿಂದಾಗಿ, ವಸೂಲಾಗದ ಸಾಲಗಳಿಗಾಗಿ ತೆಗೆದಿರಿಸಬೇಕಿರುವ ಮೊತ್ತವು ಕೂಡ ತಗ್ಗಿದೆ.

ADVERTISEMENT

ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಲ ನೀಡಿಕೆ ಪ್ರಮಾಣವು ಶೇ 10.5ರಷ್ಟು ಹಾಗೂ ಠೇವಣಿಗಳ ಪ್ರಮಾಣವು ಶೇ 8.5ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಕೆ. ಸತ್ಯನಾರಾಯಣ ರಾಜು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.