ADVERTISEMENT

ಡಿಸೆಂಬರ್‌ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್‌ ಲಾಭ ಶೇ 25ರಷ್ಟು ಏರಿಕೆ

ಪಿಟಿಐ
Published 29 ಜನವರಿ 2026, 15:35 IST
Last Updated 29 ಜನವರಿ 2026, 15:35 IST
.
.   

ಮುಂಬೈ: ಕೆನರಾ ಬ್ಯಾಂಕ್‌ನ ಡಿಸೆಂಬರ್‌ ತ್ರೈಮಾಸಿಕದ ನಿವ್ವಳ ಲಾಭವು ಶೇಕಡ 25ರಷ್ಟು ಹೆಚ್ಚಳ ಕಂಡಿದ್ದು, ₹5,254 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹4,214 ಕೋಟಿ ಲಾಭ ಗಳಿಸಿತ್ತು.

ಬ್ಯಾಂಕ್‌ನ ನಿವ್ವಳ ಬಡ್ಡಿ ವರಮಾನವು ಶೇ 1.13ರಷ್ಟು ಹೆಚ್ಚಳ ಕಂಡಿದ್ದು ₹9,252 ಕೋಟಿಗೆ ತಲುಪಿದೆ. ಬಡ್ಡಿಯೇತರ ವರಮಾನವು ಶೇ 36ರಷ್ಟು ಜಿಗಿತ ಕಂಡು ₹7,900 ಕೋಟಿಗೆ ತಲುಪಿದೆ. 

ವಾಹನ ಸಾಲ ನೀಡಿಕೆಯು ಬ್ಯಾಂಕ್‌ನ ಒಟ್ಟು ಸಾಲ ನೀಡಿಕೆಯ ಮೇಲೆ ಧನಾತ್ಮಕ ಪ‍ರಿಣಾಮ ಬೀರಿದೆ. ಒಟ್ಟು ಠೇವಣಿ ಬೆಳವಣಿಗೆ ದರವು ಶೇ 12.95ರಷ್ಟು ಇದೆ.

ADVERTISEMENT

ಬ್ಯಾಂಕ್‌ನ ಒಟ್ಟು ಎನ್‌ಪಿಎ ಪ್ರಮಾಣವು ಶೇ 2.08ಕ್ಕೆ ಇಳಿಕೆ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಶೇ 2.35ರಷ್ಟು ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.