ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಶನಿವಾರದಿಂದ ಜಾರಿಗೆ ಬರುವಂತೆ ವಿವಿಧ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದೆ.
ಎಂಸಿಎಲ್‌ಆರ್ ಅನ್ನು ಶೇಕಡ 0.10ರಷ್ಟು ಏರಿಕೆ ಮಾಡಿದೆ. ಇದರಿಂದ ಒಂದು ತಿಂಗಳ ಅವಧಿಯ ಎಂಸಿಎಲ್ಆರ್ ಶೇ 6.55ರಿಂದ ಶೇ 6.65ಕ್ಕೆ ಏರಿಕೆ ಆಗಿದೆ. ಒಂದು ವರ್ಷದ ಎಂಸಿಎಲ್‌ಆರ್ ಶೇ 7.25ರಿಂದ 7.35ಕ್ಕೆ ಹೆಚ್ಚಾಗಿದೆ. ರೆಪೊ ದರ ಆಧರಿಸಿದ ಸಾಲದ ಬಡ್ಡಿದರವು ಶೇ 6.90ರಿಂದ ಶೇ 7.30ಕ್ಕೆ ಏರಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.