ADVERTISEMENT

ಸಂಘ–ಸಂಸ್ಥೆಗೆ ಕೆನರಾ ಬ್ಯಾಂಕ್‌ನಿಂದ ಪ್ರತ್ಯೇಕ ಖಾತೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 14 ಮೇ 2025, 13:34 IST
Last Updated 14 ಮೇ 2025, 13:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್, ಸಂಘ-ಸಂಸ್ಥೆಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ‘ಕೆನರಾ ಟ್ರೂಎಡ್ಜ್‌’ ಹೆಸರಿನ ಉಳಿತಾಯ ಮತ್ತು ಚಾಲ್ತಿ ಖಾತೆ ಸೌಲಭ್ಯವನ್ನು ಆರಂಭಿಸಿದೆ.

ಠೇವಣಿ ಪಾವತಿ ಮಾಡದೆ ಖಾತೆ ತೆರೆಯಬಹುದು. ಈ ಖಾತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಬ್ಯಾಂಕ್‌ನಲ್ಲಿ ಪ್ರತ್ಯೇಕವಾಗಿ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ. ಅವರು ಬ್ಯಾಂಕಿಂಗ್ ವಹಿವಾಟು ಪೂರೈಸಲು ನೆರವು ನೀಡಲಿದ್ದಾರೆ ಎಂದು ಬ್ಯಾಂಕ್ ತಿಳಿಸಿದೆ. 

ಇದರಡಿ ಖಾತೆ ತೆರೆದ ಸಂಘ–ಸಂಸ್ಥೆಗಳ ಪ್ರಮುಖ ಪದಾಧಿಕಾರಿಗಳಿಗೆ ಪ್ರೀಮಿಯಂ ಡೆಬಿಟ್ ಕಾರ್ಡ್‌ ವಿತರಿಸಲಾಗುತ್ತದೆ. ಸುಗಮ ಕಾರ್ಯಾಚರಣೆಗಾಗಿ ಪದಾಧಿಕಾರಿಗಳ ವೈಯಕ್ತಿಕ ಉಳಿತಾಯ ಖಾತೆಗೆ ಈ ಖಾತೆಗಳನ್ನು ಲಿಂಕ್ ಕೂಡ ಮಾಡಲಾಗುತ್ತದೆ. ಉಚಿತವಾಗಿ ಡಿಜಿಟಲ್ ಬ್ಯಾಂಕಿಂಗ್ ಸೇವಾ ಸೌಲಭ್ಯವೂ ದೊರೆಯಲಿದೆ ಎಂದು ತಿಳಿಸಿದೆ.

ADVERTISEMENT

ಆರೋಗ್ಯ, ಶಿಕ್ಷಣ, ಧಾರ್ಮಿಕ ಮತ್ತು ಇತರೆ ಸಂಘ–ಸಂಸ್ಥೆಗಳು ಈ ಖಾತೆ ತೆರೆಯಬಹುದು. ದೇಶದಾದ್ಯಂತ ಬ್ಯಾಂಕ್‌ನ ಎಲ್ಲಾ ಶಾಖೆಗಳಲ್ಲೀ ಈ ಖಾತೆ ತೆರೆಯಬಹುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.