ADVERTISEMENT

ಎಂಸಿಎಲ್‌ಆರ್‌ ತಗ್ಗಿಸಿದ ಕೆನರಾ ಬ್ಯಾಂಕ್

ಪಿಟಿಐ
Published 6 ಆಗಸ್ಟ್ 2020, 12:49 IST
Last Updated 6 ಆಗಸ್ಟ್ 2020, 12:49 IST
ಕೆನರಾ ಬ್ಯಾಂಕ್
ಕೆನರಾ ಬ್ಯಾಂಕ್   

ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, ತನ್ನ ಠೇವಣಿ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಸಾಲಗಳ (ಎಂಸಿಎಲ್‌ಆರ್‌) ಬಡ್ಡಿದರವನ್ನು ಶೇಕಡ 0.30ರವರೆಗೆ ಇಳಿಕೆ ಮಾಡಿದೆ. ಪರಿಷ್ಕೃತ ಬಡ್ಡಿದರಗಳು ಶುಕ್ರವಾರದಿಂದಲೇ ಜಾರಿಗೆ ಬರಲಿವೆ ಎಂದು ಬ್ಯಾಂಕ್‌ ಹೇಳಿದೆ.

ಒಂದು ತಿಂಗಳ ಸಾಲದ ಮೇಲಿನ ಬಡ್ಡಿದರವನ್ನು ಶೇ 0.20ರಷ್ಟು ಕಡಿಮೆ ಮಾಡಿದ್ದು, ಗ್ರಾಹಕರಿಗೆ ವಿಧಿಸುವ ದರ ಶೇ 7ಕ್ಕೆ ತಲುಪಿದೆ. ಮೂರು ತಿಂಗಳ ಎಂಸಿಎಲ್‌ಆರ್‌ ಶೇ 7.45ರಿಂದ ಶೇ 7.15ಕ್ಕೆ ಇಳಿಕೆ ಮಾಡಲಾಗಿದೆ. ಆರು ತಿಂಗಳ ಎಂಸಿಎಲ್‌ಆರ್ ಶೇ 7.50ರಿಂದ ಶೇ 7.40ಕ್ಕೆ ಹಾಗೂ ಒಂದು ವರ್ಷದ ಎಂಸಿಎಲ್‌ಆರ್‌ ಅನ್ನು ಶೇ 7.55ರಿಂದ ಶೇ 7.45ಕ್ಕೆ ತಗ್ಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT