ADVERTISEMENT

ಬ್ಯಾಂಕ್‌ಗಳಲ್ಲಿ ಬಂಡವಾಳದ ಬಿಕ್ಕಟ್ಟು

ಐದು ತಿಂಗಳಿನಲ್ಲಿ ಬೇಕಿದೆ ₹ 1.2 ಲಕ್ಷ ಕೋಟಿ: ಸರ್ಕಾರದ ಮೇಲೆ ಒತ್ತಡ

ಪಿಟಿಐ
Published 7 ನವೆಂಬರ್ 2018, 19:46 IST
Last Updated 7 ನವೆಂಬರ್ 2018, 19:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ:ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ (ಪಿಎಸ್‌ಬಿ) ಆರ್ಥಿಕ ಸ್ಥಿತಿ ಸುಧಾರಿಸುವ ಲಕ್ಷಣಗಳೇ ಕಾಣುತ್ತಿಲ್ಲ.ವಸೂಲಿಯಾಗದ ಸಾಲ (ಎನ್‌ಪಿಎ) ಹೆಚ್ಚುತ್ತಿದ್ದು, ತ್ರೈಮಾಸಿಕಗಳಲ್ಲಿ ಬ್ಯಾಂಕ್‌ಗಳ ಲಾಭದ ಪ್ರಮಾಣವೂ ಇಳಿಕೆ ಕಾಣುತ್ತಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ (ಪಿಎಸ್‌ಬಿ) ಐದು ತಿಂಗಳಿನಲ್ಲಿ ₹ 1.2 ಲಕ್ಷ ಕೋಟಿ ಬಂಡವಾಳದ ಅಗತ್ಯವಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ₹ 53 ಸಾವಿರ ಕೋಟಿ ನೀಡಲಿದೆ. ಆದರೆ, ಬ್ಯಾಂಕ್‌ಗಳಿಗೆ ಇದಕ್ಕಿಂತಲೂ ಎರಡು ಪಟ್ಟು ಹೆಚ್ಚಿಗೆ ಬಂಡವಾಳದ ಅಗತ್ಯ ಎದುರಾಗಿದೆ.

ಯಾವ ಮೂಲದಿಂದ ಬಂಡವಾಳ ಸಂಗ್ರಹಿಸುವುದು ಎನ್ನುವ ಚಿಂತೆ ಕಾಡುತ್ತಿದೆ. ಎನ್‌ಪಿಎ ಸುಳಿಯಲ್ಲಿ ಸಿಲುಕಿರುವುದರಿಂದಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಕಷ್ಟವಾಗುತ್ತಿದೆ. ಹೀಗಾಗಿಸರ್ಕಾರವೇ ಈ ಮೊತ್ತ ನೀಡಬೇಕಾಗುವ ಅನಿವಾರ್ಯತೆ ಎದುರಾಗಲಿದೆ. ಆದರೆ, ಇದರಿಂದವಿತ್ತೀಯ ಕೊರತೆ ನಿಯಂತ್ರಿಸುವ ಒತ್ತಡ ಇನ್ನಷ್ಟು ಹೆಚ್ಚಾಗಲಿದೆ. ಕೇಂದ್ರ ಸರ್ಕಾರಅಕ್ಟೋಬರ್‌ ಅಂತ್ಯಕ್ಕೆ ತನ್ನ ವಿತ್ತೀಯ ಕೊರತೆಯಲ್ಲಿ ಶೇ 95ರಷ್ಟನ್ನು ಬಳಸಿಕೊಂಡಿದೆ.

ADVERTISEMENT

ಆರ್‌ಬಿಐ ಮೇಲೆ ಒತ್ತಡ
ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ ಆರ್‌ಬಿಐ ಮೇಲೆ ಒತ್ತಡ ತರುತ್ತಿದೆ. ತನ್ನಲ್ಲಿರುವ ₹ 9.5 ಲಕ್ಷ ಕೋಟಿ ಹೆಚ್ಚುವರಿ ಸಂಗ್ರಹದಲ್ಲಿ ₹ 3.6 ಲಕ್ಷ ಕೋಟಿಯನ್ನು ವರ್ಗಾಯಿಸುವಂತೆ ಹಣಕಾಸು ಸಚಿವಾಲಯ ಆರ್‌ಬಿಐಗೆ ಬೇಡಿಕೆ ಇಟ್ಟಿದೆ.

ನಿರ್ಬಂಧಿತ ಕ್ರಮಗಳ ಹೇರಿಕೆ (ಪಿಸಿಎ) ವ್ಯಾಪಿಯಲ್ಲಿರುವ 11 ಬ್ಯಾಂಕ್‌ಗಳಿಗೆಈ ಮೊತ್ತವನ್ನುನೀಡುವುದು ಸರ್ಕಾರದ ಉದ್ದೇಶವಾಗಿದೆ.

ಹಣಕಾಸು ಸಚಿವಾಲಯ ತಿಂಗಳಾಂತ್ಯದ ವೇಳೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ (ಪಿಎಸ್‌ಬಿ) ಎರಡನೇ ಹಂತದ ಬಂಡವಾಳ ನೆರವು ನೀಡಲಿದೆ ಎಂದು ಮೂಲಗಳು ತಿಳಿಸಿವೆ. ಅಂದಾಜು ₹ 53 ಸಾವಿರ ಕೋಟಿ ನೀಡುವ ಸಾಧ್ಯತೆ ಇದೆ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.