ADVERTISEMENT

ಕಾರ್‌ದೇಖೊ ಈಗ ಯೂನಿಕಾರ್ನ್‌

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 17:02 IST
Last Updated 13 ಅಕ್ಟೋಬರ್ 2021, 17:02 IST

ಬೆಂಗಳೂರು: ಕಾರುಗಳ ಬಗ್ಗೆ ಮಾಹಿತಿ ನೀಡುವ ಆನ್‌ಲೈನ್‌ ವೇದಿಕೆ ಕಾರ್‌ದೇಖೊ ಹೊಸದಾಗಿ ₹ 1,882 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ಹೇಳಿದೆ. ಈ ಬಂಡವಾಳ ಸಂಗ್ರಹ ಮೂಲಕ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 9 ಸಾವಿರ ಕೋಟಿಯನ್ನು ದಾಟಿದ್ದು, ದೇಶದ ಯೂನಿಕಾರ್ನ್‌ಗಳ ಪಟ್ಟಿಗೆ ಸೇರಿದೆ.

ಯೂನಿಕಾರ್ನ್‌ ಪಟ್ಟಿಗೆ ಸೇರಿದ, ರಾಜಸ್ಥಾನದ ಜೈಪುರದ ಮೊದಲ ಕಂಪನಿ ಇದು. ಈಗ ಸಂಗ್ರಹವಾಗಿರುವ ಬಂಡವಾಳವನ್ನು ಕಂಪನಿಯ ಬೆಳವಣಿಗೆಗೆ ಬಳಸಿಕೊಳ್ಳಲಾಗುವುದು. ಅದರಲ್ಲೂ ಮುಖ್ಯವಾಗಿ ಸೆಕೆಂಡ್‌ಹ್ಯಾಂಡ್‌ ಕಾರು ವಹಿವಾಟು, ಹಣಕಾಸಿನ ಸೇವೆಗಳು ಮತ್ತು ವಿಮೆ, ಹೊಸ ಮಾರುಕಟ್ಟೆಗಳ ಕಡೆ ಗಮನ ಹರಿಸಲು ಇದನ್ನು ಬಳಸಿಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕಂಪನಿಯು ಈಗ 100ಕ್ಕೂ ಹೆಚ್ಚಿನ ಮಾರುಕಟ್ಟೆಗಳಿಂದ ಹಳೆಯ ಕಾರುಗಳನ್ನು ಖರೀದಿಸುತ್ತಿದೆ. ಕಾರ್‌ದೇಖೊ ಕಂಪನಿಯು ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ಮೂಲಕ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ ಉದ್ದೇಶ ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.