ADVERTISEMENT

ಗ್ರಾಹಕರ ಹಿತರಕ್ಷಣೆ ಜಿಎಸ್‌ಟಿ ವೆರಿಫೈ ಆ್ಯಪ್‌ ಅಭಿವೃದ್ಧಿ

CBIC, GST 'Verify App'

ಪಿಟಿಐ
Published 5 ಜುಲೈ 2018, 20:21 IST
Last Updated 5 ಜುಲೈ 2018, 20:21 IST
   

ನವದೆಹಲಿ: ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ ಮಂಡಳಿಯು (ಸಿಬಿಐಸಿ) ಗ್ರಾಹಕರ ಹಿತರಕ್ಷಣೆಗಾಗಿ ‘ಜಿಎಸ್‌ಟಿ ವೆರಿಫೈ’ ಆ್ಯಪ್‌ ಅಭಿವೃದ್ಧಿಪಡಿಸಿದೆ.

ಇದು ಆಂಡ್ರಾಯ್ಡ್‌ ಆ್ಯಪ್‌ ಆಗಿದ್ದು, ಹೈದರಾಬಾದ್‌ನ ಜಿಎಸ್‌ಟಿಯ ಜಂಟಿ ಆಯುಕ್ತ ಬಿ. ರಘು ಕಿರಣ್‌ ಅಭಿವೃದ್ಧಿಪಡಿಸಿದ್ದಾರೆ.ವರ್ತ

ಕರು ಜಿಎಸ್‌ಟಿ ಸಂಗ್ರಹಿಸಲು ಅರ್ಹರಾಗಿದ್ದಾರೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು ಈ ಆ್ಯಪ್‌ ಗ್ರಾಹಕರಿಗೆ ನೆರವಾಗಲಿದೆ. ಅಲ್ಲದೆ, ಜಿಎಸ್‌ಟಿ ಸಂಗ್ರಹಿಸುವ ವ್ಯಕ್ತಿ ಅಥವಾ ಕಂಪನಿಯ ಮಾಹಿತಿಯನ್ನೂ ನೀಡುತ್ತದೆ.

ADVERTISEMENT

ಖರೀದಿ ನಡೆಸುವಾಗ, ಹೋಟೆಲ್ ಬಿಲ್ ಪಾವತಿಸುವ ವೇಳೆ ಮಾಲೀಕರು ಜಿಎಸ್‌ಟಿ ಪಡೆಯಲು ಅರ್ಹರಾಗಿದ್ದಾರೆಯೇ ಎನ್ನುವುದನ್ನು ತಕ್ಷಣವೇ ಈ ಆ್ಯಪ್‌ನಿಂದ ಕಂಡುಕೊಳ್ಳಬಹುದು. ಕಂಪೊಸಿಷನ್‌ ಸ್ಕೀಮ್‌ ಆಯ್ಕೆ ಮಾಡಿಕೊಂಡಿರುವವರು ತೆರಿಗೆ ಸಂಗ್ರಹಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.