ADVERTISEMENT

ಹೋಟೆಲ್‌ನಲ್ಲಿ ಸೇವಾ ಶುಲ್ಕ: ಬೆಂಗಳೂರು ಸೇರಿ ಹಲವೆಡೆ 85 ದೂರು ದಾಖಲು

ಪಿಟಿಐ
Published 9 ಜುಲೈ 2022, 22:30 IST
Last Updated 9 ಜುಲೈ 2022, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹೋಟೆಲ್‌ಗಳಲ್ಲಿ ಸೇವಾ ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂದು ಬೆಂಗಳೂರು ಸೇರಿದಂತೆ ಹಲವು ನಗರಗಳಿಂದ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (ಎನ್‌ಸಿಎಚ್‌) ಒಟ್ಟು 85 ದೂರುಗಳು ಬಂದಿವೆ.

ಗ್ರಾಹಕರಿಂದ ಸೇವಾ ಶುಲ್ಕ ಸಂಗ್ರಹಿಸದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಬಳಿಕ, ಜುಲೈ 5 ರಿಂದ 8ರ ಒಳಗೆ ಈ ದೂರುಗಳು ಬಂದಿವೆ ಎಂದುಕೇಂದ್ರ ಗ್ರಾಹಕರ ರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಶನಿವಾರ ಮಾಹಿತಿ ನೀಡಿದೆ.

ನಿಯಮ ಉಲ್ಲಂಘನೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಅದು ಹೇಳಿದೆ.

ಹೋಟೆಲ್‌ಗಳು ಯಾವುದೇ ರೀತಿಯಲ್ಲಿಯೂ ಗ್ರಾಹಕರಿಂದ ಸೇವಾ ಶುಲ್ಕ ಸಂಗ್ರಹಿಸುವಂತೆ ಇಲ್ಲ. ಸೇವಾ ಶುಲ್ಕ ಪಾವತಿಯು ಗ್ರಾಹಕರ ಆಯ್ಕೆಗೆ ಬಿಟ್ಟಿದ್ದಾಗಿದೆ ಎಂದು ಪ್ರಾಧಿಕಾರವು ಸ್ಪಷ್ಟವಾಗಿ ಹೇಳಿದೆ.

ಅತಿ ಹೆಚ್ಚು ದೂರು ಬಂದಿರುವ ನಗರಗಳ ವಿವರ

ನಗರ; ದೂರುಗಳ ಸಂಖ್ಯೆ

ದೆಹಲಿ; 18

ಬೆಂಗಳೂರು; 15

ಮುಂಬೈ; 11

ಪುಣೆ; 4

ಗಾಜಿಯಾಬಾದ್‌; 3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.