ADVERTISEMENT

ಸಿಮೆಂಟ್‌ ದರ ಹೆಚ್ಚಳ

ಪಿಟಿಐ
Published 5 ಮಾರ್ಚ್ 2019, 19:09 IST
Last Updated 5 ಮಾರ್ಚ್ 2019, 19:09 IST
   

ನವದೆಹಲಿ: ಸಿಮೆಂಟ್‌ ದರ ಫೆಬ್ರುವರಿಯಲ್ಲಿ 50 ಕೆ.ಜಿ ಚೀಲಕ್ಕೆ ₹ 24 ರಿಂದ ₹ 25 ಹೆಚ್ಚಾಗಿದೆ ಎಂದು ಕ್ರಿಸಿಲ್‌ ಸಂಸ್ಥೆ ವರದಿ ನೀಡಿದೆ.

ಬೆಂಗಳೂರಿನಲ್ಲಿ ವಿವಿಧ ಬ್ರ್ಯಾಂಡ್‌ಗಳ ಸಿಮೆಂಟ್‌ ಚಿಲ್ಲರೆ ಮಾರಾಟ ದರ 50 ಕೆ.ಜಿ ಚೀಲಕ್ಕೆ ಸರಾಸರಿ ₹ 362 ಇದೆ.ವೆಚ್ಚದಲ್ಲಿ ಇಳಿಕೆ ಮತ್ತು ಬೇಡಿಕೆಯಲ್ಲಿನ ಹೆಚ್ಚಳದಿಂದಾಗಿ ದರದಲ್ಲಿ ಏರಿಕೆಯಾಗುತ್ತಿದೆ.

ಬೆಂಗಳೂರು, ಹೈದರಾಬಾದ್‌ ಮತ್ತು ಚೆನ್ನೈ ಒಳಗೊಂಡುದಕ್ಷಿಣ ಭಾಗದಲ್ಲಿ ಸಿಮೆಂಟ್‌ ದರ ಅತಿ ಹೆಚ್ಚು ಏರಿಕೆ ಕಂಡಿದೆ.ಜಿಎಸ್‌ಟಿ ಜಾರಿಗೊಳಿಸಿದ ಬಳಿಕ ಸಿಮೆಂಟ್‌ ದರದಲ್ಲಿ ಏರಿಕೆಯಾಗಿದೆ. ಇದರಿಂದ ಉದ್ಯಮದ ಕಾರ್ಯಾಚರಣೆ ಲಾಭದಲ್ಲಿ ಏರಿಕೆ ಕಂಡುಬರಲಿದೆ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.