ADVERTISEMENT

ಇ–ಕಾಮರ್ಸ್‌ ಮಾರಾಟ ನಿಯಮ ಕಠಿಣ

ಪಿಟಿಐ
Published 26 ಡಿಸೆಂಬರ್ 2018, 18:37 IST
Last Updated 26 ಡಿಸೆಂಬರ್ 2018, 18:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಫ್ಲಿಪ್‌ಕಾರ್ಟ್‌, ಅಮೆಜಾನ್‌ನಂತಹ ಇ–ಕಾಮರ್ಸ್‌ ಕಂಪನಿಗಳ ಭಾರಿ ರಿಯಾಯ್ತಿ ಮಾರಾಟಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಆನ್‌ಲೈನ್‌ ಮಾರಾಟ ನಿಯಮಗಳನ್ನು ಬಿಗಿಗೊಳಿಸಿದೆ.

2019ರ ಫೆಬ್ರುವರಿ 1 ರಿಂದ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಷೇರುಪಾಲು ಹೊಂದಿರುವ ಕಂಪನಿಗಳ ಉತ್ಪನ್ನಗಳನ್ನು ಮಾರಾಟಮಾಡುವುದಕ್ಕೆ ನಿಷೇಧ ಹೇರಿದೆ. ಕೇವಲ ಆನ್‌ಲೈನ್‌ನಲ್ಲಿ (ಎಕ್ಸ್‌ಕ್ಲ್ಯೂಸಿವ್‌ ಸೇಲ್ಸ್‌) ಮಾತ್ರವೇ ಮಾರಾಟ ಮಾಡುವಂತೆ ಯಾವುದೇ ಕಂಪನಿಗಳಿಗೆ ನಿರ್ಬಂಧಿಸುವಂತಿಲ್ಲ.ಕ್ಯಾಷ್‌ಬ್ಯಾಕ್‌ ಕೊಡುಗೆಯು ನ್ಯಾಯೋಚಿತ ಮತ್ತು ಪಕ್ಷಪಾತರಹಿತವಾಗಿರಬೇಕು. ಒಂದೇ ಕಂಪನಿ ಅಥವಾ ಸಮೂಹ ಕಂಪನಿಗಳ ಶೇ 25ಕ್ಕಿಂತಲೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.