ADVERTISEMENT

₹33,259ಕ್ಕೆ ತಲುಪಿದ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 17:02 IST
Last Updated 9 ಜನವರಿ 2020, 17:02 IST
ಬ್ಯಾಡಗಿ ಮಾರುಕಟ್ಟೆಯಲ್ಲಿ ₹33,256 ಗರಿಷ್ಠ ಬೆಲೆಗೆ ಮಾರಾಟವಾದ ಡಬ್ಬಿ ಮೆಣಸಿನಕಾಯಿ 
ಬ್ಯಾಡಗಿ ಮಾರುಕಟ್ಟೆಯಲ್ಲಿ ₹33,256 ಗರಿಷ್ಠ ಬೆಲೆಗೆ ಮಾರಾಟವಾದ ಡಬ್ಬಿ ಮೆಣಸಿನಕಾಯಿ    

ಬ್ಯಾಡಗಿ (ಹಾವೇರಿ ಜಿಲ್ಲೆ) : ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಬೆಲೆ ಮತ್ತೆ ದಾಖಲೆ ಮಟ್ಟಕ್ಕೆ ಏರಿದೆ. ಗುರುವಾರ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹33,259 ರಂತೆ ಮಾರಾಟವಾಗಿದೆ.

ರೋಣ ತಾಲ್ಲೂಕಿನ ರೈತ ಸಂಗರಡ್ಡೆಪ್ಪ ಭೂಸರೆಡ್ಡಿ ಅವರು ಎಪಿಎಂಸಿಗೆ ತಂದಿದ್ದ ಡಬ್ಬಿ ಮೆಣಸಿನಕಾಯಿಗೆ ಈ ದರ ಸಿಕ್ಕಿದೆ.

‘ಕಡ್ಡಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹18,609ರಂತೆ ಹಾಗೂ ಗುಂಟೂರ ತಳಿ ಗರಿಷ್ಠ ₹9,009 ರಂತೆ ಮಾರಾಟವಾಗಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್‌.ಬಿ.ನ್ಯಾಮಗೌಡ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.