ಕೋಲ್ಕತ್ತ: ಭಾರತೀಯ ಕಲ್ಲಿದ್ದಲು ನಿಗಮವು (ಸಿಐಎಲ್) ಕಳೆದ ಒಂದು ದಶಕದ ಅವಧಿಯಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ₹5,570 ಕೋಟಿ ವೆಚ್ಚ ಮಾಡಿದೆ ಎಂದು ನಿಗಮದ ಅಧ್ಯಕ್ಷ ಪಿ.ಎಂ. ಪ್ರಸಾದ್ ತಿಳಿಸಿದ್ದಾರೆ.
ಭಾನುವಾರ ನಡೆದ ನಿಗಮದ 3ನೇ ಸಿಎಸ್‌ಆರ್ ನಿಧಿ ಹಂಚಿಕೆ ಸಭೆಯಲ್ಲಿ ಮಾತನಾಡಿದ ಅವರು, ಈ ನಿಧಿಯಡಿ ಶಿಕ್ಷಣ, ಆರೋಗ್ಯ, ಕೌಶಲ ಅಭಿವೃದ್ಧಿ, ಕ್ರೀಡೆ ಮತ್ತು ಮಹಿಳಾ ಸಬಲೀಕರಣಕ್ಕೆ ಹಣ ವಿನಿಯೋಗಿಸಲಾಗಿದೆ ಎಂದರು.
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಮಾತನಾಡಿ, ‘ಬುಡಕಟ್ಟು ಜನರು ಮತ್ತು ಕಲ್ಲಿದ್ದಲು ಗಣಿ ಪ್ರದೇಶದ ನಾಗರಿಕರ ಜೀವನಮಟ್ಟದ ಸುಧಾರಣೆಗೆ ಸಿಎಸ್‌ಆರ್ ಹಣವು ನೆರವಾಗಿದೆ’ ಎಂದು ಹೇಳಿದರು.
ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ವಿಕ್ರಮ್ ದೇವ್ ದತ್ ಮಾತನಾಡಿ, ಕಲ್ಲಿದ್ದಲು ಕಂಪನಿಗಳ ಸಿಎಸ್‌ಆರ್ ನಿಧಿಯಡಿ ಕಳೆದ ಒಂದು ದಶಕದಲ್ಲಿ ಹಮ್ಮಿಕೊಂಡಿರುವ ಯೋಜನೆಗಳು ಅರ್ಥಪೂರ್ಣವಾಗಿವೆ. ಕಲ್ಲಿದ್ದಲು ಗಣಿ ಪ್ರದೇಶದ ಜನರ ಅಭಿವೃದ್ಧಿ ಚಟುವಟಿಕೆಗಳಿಗೆ ವರದಾನವಾಗಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.