ADVERTISEMENT

ವಾಣಿಜ್ಯ ಸಿಲಿಂಡರ್‌ ದರ ₹14.50 ಇಳಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2025, 14:16 IST
Last Updated 1 ಮೇ 2025, 14:16 IST
ಸಿಲಿಂಡರ್‌
ಸಿಲಿಂಡರ್‌   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಿಮಾನ ಇಂಧನ (ಎಟಿಎಫ್‌) ಮತ್ತು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ದರವನ್ನು ಇಳಿಕೆ ಮಾಡಿವೆ. ಹೊಸ ದರವು ಗುರುವಾರದಿಂದಲೇ ಜಾರಿಗೆ ಬಂದಿದೆ. 

ವಾಣಿಜ್ಯ ಉದ್ದೇಶಕ್ಕೆ ಬಳಸುವ 19 ಕೆ.ಜಿ ತೂಕದ ಸಿಲಿಂಡರ್‌ ದರ ₹14.50 ಕಡಿಮೆ ಆಗಿದೆ. ಪ್ರಸ್ತುತ ದರ ದೆಹಲಿಯಲ್ಲಿ ₹1,747 ಆಗಿದೆ. ಮುಂಬೈನಲ್ಲಿ ₹1,669 ಇದೆ. 

ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರವು ಕಳೆದ ತಿಂಗಳು ₹50 ಹೆಚ್ಚಳವಾಗಿದ್ದು, ₹853 ಆಗಿದೆ.

ADVERTISEMENT

ವಿಮಾನ ಇಂಧನ ದರ ಇಳಿಕೆ: ವಿಮಾನಗಳಲ್ಲಿ ಬಳಸುವ ಇಂಧನದ ಬೆಲೆ ಪ್ರತಿ ಕಿಲೋಲೀಟರ್‌ಗೆ (ಒಂದು ಕಿಲೋ ಲೀಟರ್‌ ಎಂದರೆ ಒಂದು ಸಾವಿರ ಲೀಟರ್) ₹3,954 (ಶೇ 4.4ರಷ್ಟು) ಕಡಿಮೆಯಾಗಿದ್ದು, ದೆಹಲಿಯಲ್ಲಿ ₹85,486 ಆಗಿದೆ. ‌

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ, ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ತೈಲ ಮಾರಾಟ ಕಂಪನಿಗಳು ಪ್ರತಿ ತಿಂಗಳು ಈ ದರ ಪರಿಷ್ಕರಣೆ ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.