ADVERTISEMENT

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ ₹91.5 ಇಳಿಕೆ

ಪಿಟಿಐ
Published 1 ಸೆಪ್ಟೆಂಬರ್ 2022, 11:02 IST
Last Updated 1 ಸೆಪ್ಟೆಂಬರ್ 2022, 11:02 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಗುರುವಾರ ₹ 91.5ರಷ್ಟು ಇಳಿಕೆ ಮಾಡಿವೆ. ಇದರಿಂದಾಗಿ ದೆಹಲಿಯಲ್ಲಿ 19 ಕೆ.ಜಿ ತೂಕದ ಸಿಲಿಂಡರ್‌ ದರ ₹1,976.50 ರಿಂದ ₹ 1,885ಕ್ಕೆ ಇಳಿಕೆ ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲಕ್ಲಿ ಕಚ್ಚಾ ತೈಲ ದರ ಇಳಿಕೆ ಆಗಿರುವುದರಿಂದ ಈ ಪ‍ರಿಷ್ಕರಣೆ ಮಾಡಿರುವುದಾಗಿ ಕಂಪನಿಗಳು ತಿಳಿಸಿವೆ. ಆದರೆ, ಗೃಹ ಬಳಕೆಯ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ವಿಮಾನ ಇಂಧನ ದರ (ಎಟಿಎಫ್) ದರವನ್ನು ಶೇ 0.7ರಷ್ಟು ಇಳಿಕೆ ಮಾಡಲಾಗಿದೆ. ಇದರಿಂದ ದೆಹಲಿಯಲ್ಲಿ ಪ್ರತಿ ಕಿಲೋ ಲೀಟರ್‌ ದರ ₹ 874.13ರಷ್ಟು ಇಳಿಕೆ ಆಗಿದ್ದು ₹ 1.21 ಲಕ್ಷಕ್ಕೆ ತಲುಪಿದೆ.(ಒಂದು ಕಿಲೋ ಲೀಟರ್‌ ಎಂದರೆ ಒಂದು ಸಾವಿರ ಲೀಟರ್).

ADVERTISEMENT

ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಮಾರಾಟ ದರದಲ್ಲಿ ವ್ಯತ್ಯಾಸ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.