ADVERTISEMENT

8 ಮೂಲ ಸೌಕರ್ಯಗಳ ಪ್ರಗತಿ ಶೇ 2.2

ಪಿಟಿಐ
Published 28 ಫೆಬ್ರುವರಿ 2020, 20:06 IST
Last Updated 28 ಫೆಬ್ರುವರಿ 2020, 20:06 IST

ನವದೆಹಲಿ : ಜನವರಿ ತಿಂಗಳಲ್ಲಿ ಎಂಟು ಪ್ರಮುಖ ಮೂಲ ಸೌಕರ್ಯಗಳು ಶೇ 2.2ರಷ್ಟು ಪ್ರಗತಿ ದಾಖಲಿಸಿವೆ.

ಕಲ್ಲಿದ್ದಲು (ಶೇ 8), ತೈಲಾಗಾರ ಉತ್ಪನ್ನ (ಶೇ 1.9) ಮತ್ತು ವಿದ್ಯುತ್‌ ಉತ್ಪಾದನೆಯಲ್ಲಿನ (ಶೇ 2.8) ಹೆಚ್ಚಳದ ಫಲವಾಗಿ ಈ ಏರಿಕೆ ಸಾಧ್ಯವಾಗಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿನ ಈ ಮೂಲ ಸೌಕರ್ಯಗಳ ಬೆಳವಣಿಗೆಯು ಶೇ 1.5ರಷ್ಟಿತ್ತು. ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ರಸಗೊಬ್ಬರಗಳ ಉತ್ಪಾದನೆಯು ಕಡಿಮೆಯಾಗಿದೆ.

ಏಪ್ರಿಲ್‌ನಿಂದ ಜನವರಿವರೆಗಿನ ಅವಧಿಯಲ್ಲಿನ ಮೂಲ ಸೌಕರ್ಯಗಳ ಪ್ರಗತಿಯು ವರ್ಷದ ಹಿಂದಿನ ಶೇ 4.4ರಷ್ಟಕ್ಕೆ ಹೋಲಿಸಿದರೆ ಶೇ 0.6ಕ್ಕೆ ಇಳಿದಿದೆ. 2019ರ ಆಗಸ್ಟ್‌ನಿಂದ ನವೆಂಬರ್‌ವರೆಗೆ ಈ ವಲಯವು ನಕಾರಾತ್ಮಕ ಪ್ರಗತಿ ಸಾಧಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.