ನವದೆಹಲಿ: ಕಂಪನಿಗಳು ಬಂಡವಾಳ ಮಾರುಕಟ್ಟೆಯಿಂದ ಅಕ್ಟೋಬರ್‌ನಲ್ಲಿ ₹ 73,215 ಕೋಟಿ ಸಂಗ್ರಹಿಸಿವೆ. ಸಾಲಪತ್ರಗಳ ಖಾಸಗಿ ವಿತರಣೆಯ ಮೂಲಕ ಹೆಚ್ಚಿನ ಬಂಡವಾಳ ಸಂಗ್ರಹವಾಗಿದೆ.
ವಹಿವಾಟು ವಿಸ್ತರಣೆ, ಸಾಲ ಮರುಪಾವತಿ ಹಾಗೂ ದುಡಿಯುವ ಬಂಡವಾಳದ ಅಗತ್ಯಗಳನ್ನು ಪೂರೈಸಿಕೊಳ್ಳಲು ಅವು ಈ ಬಂಡವಾಳ ಸಂಗ್ರಹಿಸಿವೆ.
ಕಂಪನಿಗಳು ಸೆಪ್ಟೆಂಬರ್‌ನಲ್ಲಿ ₹ 75,232 ಕೋಟಿ ಸಂಗ್ರಹಿಸಿದ್ದವು. ಇದಕ್ಕೆ ಹೋಲಿಸಿದರೆ ಅಲ್ಪ ಇಳಿಕೆ ಆಗಿದೆ.
ಒಟ್ಟಾರೆ ₹ 73,215 ಕೋಟಿಯಲ್ಲಿ ₹ 62,331 ಕೋಟಿಯನ್ನು ಸಾಲಪತ್ರಗಳ ಖಾಸಗಿ ವಿತರಣೆ ಹಾಗೂ ₹ 4,144 ಕೋಟಿಯನ್ನು ಷೇರುಗಳ ವಿತರಣೆಯ ಮೂಲಕ ಸಂಗ್ರಹಿಸಲಾಗಿದೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಪ್ರಕಟಿಸಿರುವ ತಿಂಗಳ ವರದಿಯಲ್ಲಿ ಈ ಮಾಹಿತಿ ಇದೆ. ಸಾಲಪತ್ರಗಳ ಸಾರ್ವಜನಿಕ ವಿತರಣೆಯ ಮೂಲಕ ₹ 5,825 ಕೋಟಿ ಸಂಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.