ADVERTISEMENT

ಗುರೂಜಿ ಅವತಾರದಲ್ಲಿ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 16:00 IST
Last Updated 16 ಆಗಸ್ಟ್ 2022, 16:00 IST
ಗುರೂಜಿ ಅವತಾರದಲ್ಲಿ ಮಹೇಂದ್ರ ಸಿಂಗ್ ಧೋನಿ
ಗುರೂಜಿ ಅವತಾರದಲ್ಲಿ ಮಹೇಂದ್ರ ಸಿಂಗ್ ಧೋನಿ   

ಬೆಂಗಳೂರು: ಮೈಸೂರ್ ದೀಪ್ ಪರ್ಫ್ಯೂಮರಿ ಹೌಸ್‌ (ಎಂಡಿಪಿಎಚ್‌) ಕಂಪನಿಯ ಬ್ರ್ಯಾಂಡ್ ಆಗಿರುವ ‘ಜೆಡ್ ಬ್ಲ್ಯಾಕ್’ ಅಗರಬತ್ತಿಯ ಟಿ.ವಿ. ಜಾಹೀರಾತಿನಲ್ಲಿ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು ಗುರೂಜಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಧೋನಿ ಅವರು ಜೆಡ್‌ ಬ್ಲ್ಯಾಕ್‌ 3ಇನ್‌1 ಅಗರಬತ್ತಿ ಬ್ರ್ಯಾಂಡ್‌ಅನ್ನು ಟಿ.ವಿ., ಮುದ್ರಣ, ಸಾಮಾಜಿಕ ಜಾಲತಾಣ ಮಾಧ್ಯಮಗಳ ಮೂಲಕ ಸತತ ಐದು ವರ್ಷಗಳಿಂದ ಅನುಮೋದಿಸಿಕೊಂಡು ಬಂದಿದ್ದಾರೆ. ಈ ಅವಧಿಯಲ್ಲಿ ಕಂಪನಿಯ ಜನಪ್ರಿಯತೆಯು ಜಗತ್ತಿನ ಎಲ್ಲೆಡೆ ಹೆಚ್ಚಾಗಿದೆ ಎಂದು ಪ್ರಕಟಣೆ ತಿಳಿಸಿದೆ.

‘ಧೋನಿ ಅವರು ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಗೌರವ ಸಂಪಾದಿಸಿದವರಲ್ಲಿ ಒಬ್ಬರು. ಕ್ರಿಕೆಟಿಗರಾಗಲು ಬಯಸುವವರಿಗೆ ಧೋನಿ ಅವರು ಮಾದರಿ’ ಎಂದು ಜೆಡ್‌ ಬ್ಲ್ಯಾಕ್‌ನ ನಿರ್ದೇಶಕ ಅಂಕಿತ್ ಅಗರ್ವಾಲ್ ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.