ADVERTISEMENT

ತೈಲ ಸ್ವಾವಲಂಬನೆಯ ಸವಾಲು

ದೇಶಿ ಉತ್ಪಾದನೆ ಇಳಿಕೆ l ಆಮದು ಪ್ರಮಾಣ ಗಣನೀಯ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 17:59 IST
Last Updated 4 ಜನವರಿ 2020, 17:59 IST
ತೈಲ
ತೈಲ   

ಬೆಂಗಳೂರು: ಕಚ್ಚಾ ತೈಲ ಆಮದಿನ ಮೇಲೆ ಭಾರತವು ಅತಿ ಹೆಚ್ಚು ವೆಚ್ಚ ಮಾಡುತ್ತಿದೆ. ಹೀಗಾಗಿ ಆಮದು ಅವಲಂಬನೆ ಕಡಿಮೆ ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದೆ. ಆದರೆ, ಸದ್ಯದ ಪರಿಸ್ಥಿತಿಯನ್ನು ಪರಿಗಣಿಸಿದರೆ ಇದು ಅತ್ಯಂತ ಸವಾಲಿನ ಕೆಲಸವೇ ಸರಿ.

ದೇಶದ ತೈಲ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದರೆ, ಉತ್ಪಾದನೆ ಇಳಿಮುಖವಾಗಿದೆ.ಇದರಿಂದಾಗಿ ಕಚ್ಚಾ ತೈಲಕ್ಕಾಗಿ ಬೇರೆ ದೇಶಗಳ ಮೇಲಿನ ಆಮದು ಅವಲಂಬನೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.

ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್‌ನಲ್ಲಿ ಆಮದು ವೆಚ್ಚ ₹ 59,798 ಕೋಟಿ ಇತ್ತು. ಇದು ನವೆಂಬರ್‌ನಲ್ಲಿ ₹ 61,315 ಕೋಟಿಗೆ ಏರಿಕೆಯಾಗಿದೆ.

ADVERTISEMENT

2017–18ರಲ್ಲಿ ಶೇ 82.9ರಷ್ಟಿದ್ದ ತೈಲಆಮದುಅವಲಂಬನೆ 2018–19ರಲ್ಲಿ ಶೇ 83.7ಕ್ಕೆ ಏರಿಕೆಯಾಗಿದೆ ಎಂದುಪೆಟ್ರೋಲಿಯಂ ಸಚಿವಾಲಯದ ತೈಲೋತ್ಪನ್ನಗಳ ಯೋಜನೆ ಮತ್ತು ವಿಶ್ಲೇಷಣಾ ಘಟಕ (ಪಿಪಿಸಿಎ) ಮಾಹಿತಿ ನೀಡಿದೆ. ದೇಶಿ ಕಂಪನಿಗಳ ತೈಲ ಉತ್ಪಾದನೆಯೂ ಇಳಿಕೆಯಾಗಿದೆ. 2017–18ರಲ್ಲಿ 3.40 ಕೋಟಿ ಟನ್‌ಗಳಷ್ಟಿದ್ದ ಉತ್ಪಾದನೆಯು 2018–19ರಲ್ಲಿ 3.25 ಕೋಟಿ ಟನ್‌ಗಳಿಗೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.