ADVERTISEMENT

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಜು.1ರಿಂದ ಅನ್ವಯ: ಹಣಕಾಸು ಸಚಿವಾಲಯ

ಪಿಟಿಐ
Published 27 ಅಕ್ಟೋಬರ್ 2021, 1:31 IST
Last Updated 27 ಅಕ್ಟೋಬರ್ 2021, 1:31 IST
ಸಾಂದರ್ಭಿಕ ಚಿತ್ರDearness Allowa
ಸಾಂದರ್ಭಿಕ ಚಿತ್ರDearness Allowa   

ನವದೆಹಲಿ: ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿಭತ್ಯೆಯನ್ನು ಮೂಲವೇತನದ ಶೇಕಡ 31ರಷ್ಟಕ್ಕೆ ಹೆಚ್ಚಿಸಿರುವುದು 2021ರ ಜುಲೈ 1ರಿಂದ ಅನ್ವಯವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಹೇಳಿದೆ.

ತುಟ್ಟಿಭತ್ಯೆಯು ಮೂಲವೇತನದ ಶೇ 28ರಷ್ಟರಿಂದ, ಶೇ 31ಕ್ಕೆ ಹೆಚ್ಚಳ ಆಗಲಿದೆ. ಸಶಸ್ತ್ರ ಪಡೆಗಳ ಸಿಬ್ಬಂದಿ ಹಾಗೂ ರೈಲ್ವೆ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶವನ್ನು ಸಂಬಂಧ‍ಪಟ್ಟ ಸಚಿವಾಲಯಗಳು ಹೊರಡಿಸಲಿವೆ.

ತುಟ್ಟಿಭತ್ಯೆಯನ್ನು ಮತ್ತು ಕೇಂದ್ರದ ‍ಪಿಂಚಣಿದಾರರಿಗೆ ನೀಡುವ ಡಿಆರ್‌ಅನ್ನು (ತುಟ್ಟಿ ಪರಿಹಾರ) ಶೇ 3ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು ಕಳೆದ ವಾರ ಒಪ್ಪಿಗೆ ನೀಡಿದೆ. ಇದರಿಂದಾಗಿ 47.14 ಲಕ್ಷ ನೌಕರರಿಗೆ ಹಾಗೂ 68.62 ಲಕ್ಷ ಪಿಂಚಣಿದಾರರಿಗೆ ಅನುಕೂಲ ಆಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.