ಬೆಂಗಳೂರು: ದೇಶದ ಪ್ರಮುಖ ಸಿಮೆಂಟ್ ಕಂಪನಿಯಾದ ದಾಲ್ಮಿಯಾ ಸಿಮೆಂಟ್ (ಭಾರತ್), ತನ್ನ ಹೊಸ ಶ್ರೇಣಿಯ ಸಿಮೆಂಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹೊಸ ಉತ್ಪನ್ನಗಳಾದ ದಾಲ್ಮಿಯಾ ಡಿಎಸ್‌ಪಿ ಆರ್‌ಸಿಎಫ್ ಎಕ್ಸ್‌ಪರ್ಟ್ ++ ಮತ್ತು ದಾಲ್ಮಿಯಾ ಸಿಮೆಂಟ್ ಆರ್‌ಸಿಎಫ್ ಎಕ್ಸ್‌ಪರ್ಟ್ (ರೂಫ್ ಕಾಲಂ, ಫೌಂಡೇಶನ್ ಎಕ್ಸ್‌ಪರ್ಟ್) ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಉತ್ಪನ್ನಗಳನ್ನು ನಿರ್ಮಾಣ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಹೊಸ ಫಾರ್ಮುಲೇಷನ್ ಮತ್ತು ಅತ್ಯಾಧುನಿಕ ನ್ಯಾನೊ ಬಾಂಡಿಂಗ್ ತಂತ್ರಜ್ಞಾನ (ಎನ್‌ಬಿಟಿ) ಬಳಸಿ ತಯಾರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಉತ್ಪನ್ನಗಳು ಹೆಚ್ಚಿನ ಶಕ್ತಿ, ಉತ್ತಮ ತುಕ್ಕು ನಿರೋಧಕ ಮತ್ತು ಪರೀಕ್ಷೆಯಲ್ಲೂ ಗಟ್ಟಿಯಾಗಿ ನಿಲ್ಲಬಲ್ಲ ಶಕ್ತಿ ಸಾಮರ್ಥ್ಯ ಹೊಂದಿವೆ ಎಂದು ಹೇಳಿದೆ.
ಬಿಡುಗಡೆ ಮಾಡಿರುವ ಶ್ರೇಣಿಯಲ್ಲಿ ದಾಲ್ಮಿಯಾ ಡಿಎಸ್‌ಪಿ ಆರ್‌ಸಿಎಫ್ ++ ಪ್ರೀಮಿಯಂ ಉತ್ಪನ್ನವಾಗಿದೆ. ಇದನ್ನು ಅಲ್ಟಿಮೇಟ್ ಕಾಂಕ್ರೀಟ್ ಎಕ್ಸ್‌ಪರ್ಟ್ ಎಂದು ಹೆಸರಿಸಲಾಗಿದೆ. ಎನ್‌ಬಿಟಿ ಮತ್ತು ಹೈ ರಿಯಾಕ್ಟಿವ್ ಸಿಲಿಕಾ ಹಾಗೂ ಪೋರ್ ರಿಡಕ್ಷನ್ ಟೆಕ್ನಾಲಜಿ (ಪಿಆರ್‌ಟಿ) ಬಳಸಿಕೊಂಡು ಈ ಉತ್ಪನ್ನ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದೆ.
ಚಾವಣಿ ಮತ್ತು ಅಡಿಪಾಯ ಹಾಕಲು ಸೂಕ್ತವಾಗಿದೆ. ದೀರ್ಘಕಾಲ ಬಾಳಿಕೆಗೆ ಬರುತ್ತದೆ. ನಿರ್ಮಾಣ ಸಂದರ್ಭದಲ್ಲಿ ನಿಖರತೆ ಹೊಂದಲು ನಿರ್ಮಾಣ ಹಂತದ ಸೈಟ್‌ಗಳಲ್ಲಿ ದಾಲ್ಮಿಯಾ ಸಿಮೆಂಟ್‌ನ ಆರ್‌ಸಿಎಫ್ ಸಲಹೆಗಾರರ ತಂಡವು ಮಾರ್ಗದರ್ಶನವನ್ನೂ ನೀಡಲಿದೆ ಎಂದು ತಿಳಿಸಿದೆ.
ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ 17,421ಕ್ಕೂ ಹೆಚ್ಚು ಪಾಲುದಾರರನ್ನು ಹೊಂದಿದೆ. ದೇಶದಾದ್ಯಂತ 50 ಸಾವಿರಕ್ಕೂ ಹೆಚ್ಚು ಪಾಲುದಾರರು ಇದ್ದಾರೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.