ADVERTISEMENT

ಡೆಟ್‌ ಮ್ಯೂಚುವಲ್‌ ಫಂಡ್‌ಗಳಿಂದ ಮೇ ತಿಂಗಳಲ್ಲಿ ₹32,722 ಕೋಟಿ ಬಂಡವಾಳ ಹಿಂತೆಗೆತ

ಪಿಟಿಐ
Published 13 ಜೂನ್ 2022, 11:32 IST
Last Updated 13 ಜೂನ್ 2022, 11:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಡೆಟ್‌ ಮ್ಯೂಚುವಲ್‌ ಫಂಡ್‌ಗಳಿಂದ ಮೇ ತಿಂಗಳಿನಲ್ಲಿ ₹ 32,722 ಕೋಟಿ ಬಂಡವಾಳ ಹಿಂತೆಗೆತ ಆಗಿದೆ.

ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಹಣಕಾಸು ನೀತಿ ಬಿಗಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬಂಡವಾಳ ಹೊರಹರಿವು ಕಂಡುಬಂದಿದೆ.

ಏಪ್ರಿಲ್‌ನಲ್ಲಿ ಡೆಟ್‌ ಮ್ಯೂಚುವಲ್ ಫಂಡ್‌ಗಳು ₹ 54,656 ಕೋಟಿ ಬಂಡವಾಳ ಆಕರ್ಷಿಸಿದ್ದವು ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

ADVERTISEMENT

ಡೆಟ್‌ ಮ್ಯೂಚುವಲ್ ಫಂಡ್ ಖಾತೆಗಳ ಸಂಖ್ಯೆಯು 73.43 ಲಕ್ಷದಿಂದ 72.87 ಲಕ್ಷಕ್ಕೆ ಇಳಿಕೆ ಆಗಿದೆ. 16 ಡೆಟ್‌ ಫಂಡ್‌ ವಿಭಾಗಗಳ ಪೈಕಿ 12 ಫಂಡ್‌ಗಳಿಂದ ಮೇ ತಿಂಗಳಲ್ಲಿ ಬಂಡವಾಳ ಹೊರಹರಿವು ಆಗಿದೆ.

ಮಾರುಕಟ್ಟೆಯು ಏರಿಳಿತ ಕಾಣುತ್ತಿರುವ ಸಂದರ್ಭದಲ್ಲಿ ಡೆಟ್‌ ಫಂಡ್‌ಗಳು ಹೂಡಿಕೆಯ ಸುರಕ್ಷಿತ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಬಡ್ಡಿದರ ಏರಿಕೆ ಆಗುತ್ತಿರುವುದು, ಆರ್ಥಿಕತೆಯಲ್ಲಿನ ಅನಿಶ್ಚಿತ ಸ್ಥಿತಿ ಹಾಗೂ ಗರಿಷ್ಠ ಗಳಿಕೆಯು ಹೂಡಿಕೆದಾರರ ಮೇಲೆ ಪರಿಣಾಮ ಉಂಟುಮಾಡಿರುವ ಸಾಧ್ಯತೆ ಇದೆ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಹಿರಿಯ ವಿಶ್ಲೇಷಕಿ ಕವಿತಾ ಕೃಷ್ಣನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.