ADVERTISEMENT

ಬಾಡಿಗೆ: ದೆಹಲಿ-ಎನ್‌ಸಿಆರ್ ದೇಶದಲ್ಲೇ ದುಬಾರಿ, ಬೆಂಗಳೂರು ಅಗ್ಗ– ನೈಟ್‌ ಫ್ರಾಂಕ್‌

ಎಪಿಎಸಿಯ ಟಾಪ್‌ 23 ನಗರಗಳ ಬಾಡಿಗೆ ಸೂಚ್ಯಂಕ ಬಿಡುಗಡೆ

ಪಿಟಿಐ
Published 30 ಅಕ್ಟೋಬರ್ 2023, 3:08 IST
Last Updated 30 ಅಕ್ಟೋಬರ್ 2023, 3:08 IST
<div class="paragraphs"><p>ಸಿಲಿಕಾನ್‌ ಸಿಟಿ ಬೆಂಗಳೂರು</p></div>

ಸಿಲಿಕಾನ್‌ ಸಿಟಿ ಬೆಂಗಳೂರು

   

ನವದೆಹಲಿ: ಏಷ್ಯಾ–ಪೆಸಿಫಿಕ್‌ನ ಕಚೇರಿ ಪ್ರದೇಶಗಳಲ್ಲಿ ದೆಹಲಿ ರಾಷ್ಟ್ರ ರಾಜಧಾನಿಯು ಆರನೇ ಅತಿ ದುಬಾರಿ ನಗರ ಎನಿಸಿಕೊಂಡಿದೆ. ಜುಲೈ–ಸೆ‍ಪ್ಟೆಂಬರ್‌ನಲ್ಲಿ ಇಲ್ಲಿ ಪ್ರತಿ ಚದರ ಅಡಿಗೆ ವೆಚ್ಚವು ₹6,539 (78.4 ಡಾಲರ್‌) ಇತ್ತು ಎಂದು ನೈಟ್‌ ಫ್ರಾಂಕ್‌ ವರದಿ ಹೇಳಿದೆ. ಸ್ಥಳ ವೆಚ್ಚದಲ್ಲಿ ಬಾಡಿಗೆ, ವಿವಿಧ ತೆರಿಗೆಗಳು, ವಿಮೆ ಸೇರಿ ಆ ಸ್ಥಳಕ್ಕಾಗಿ ಮಾಡುವ ಎಲ್ಲ ವೆಚ್ಚವೂ ಸೇರುತ್ತದೆ. 

ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ನೈಟ್ ಫ್ರಾಂಕ್ ತನ್ನ ‘ಏಷ್ಯಾ-ಪೆಸಿಫಿಕ್ (ಎಪಿಎಸಿ) ಕಚೇರಿ ಬಾಡಿಗೆ ಸೂಚ್ಯಂಕದ ಮೂರನೇ ತ್ರೈಮಾಸಿಕದ (ಜುಲೈ-ಸೆಪ್ಟೆಂಬರ್, 2023) ವರದಿ ಬಿಡುಗಡೆ ಮಾಡಿದೆ. 

ADVERTISEMENT

ಹಾಂಗ್ ಕಾಂಗ್‌ನ ಎಸ್‌ಎಆರ್‌ ವರ್ಷಕ್ಕೆ ಪ್ರತಿ ಚದರ ಅಡಿಗೆ ₹13,738 (164.7 ಡಾಲರ್‌) ವೆಚ್ಚದೊಂದಿಗೆ ಈ ತ್ರೈಮಾಸಿಕದಲ್ಲಿ ಅತ್ಯಂತ ದುಬಾರಿ ಕಚೇರಿ ಪ್ರದೇಶವಾಗಿ ಮುಂದುವರಿದಿದೆ.

ಪ್ರತಿ ಚದರ ಅಡಿಗೆ ₹5,880 (70.5 ಡಾಲರ್‌) ವಾರ್ಷಿಕ ವೆಚ್ಚದೊಂದಿಗೆ ಮುಂಬೈ 9ನೇ ಅತ್ಯಂತ ದುಬಾರಿ ವಾಣಿಜ್ಯ ಮಾರುಕಟ್ಟೆಯಾಗಿದೆ. 

ಬೆಂಗಳೂರಿನಲ್ಲಿ ಕಚೇರಿ ವೆಚ್ಚವು ಪ್ರತಿ ಚದರ ಅಡಿಗೆ ₹3,011 (36.1 ಡಾಲರ್‌) ಆಗಿದ್ದು, ಸಮೀಕ್ಷೆ ನಡೆಸಿದ 23 ನಗರಗಳಲ್ಲಿ ಬೆಂಗಳೂರು 19ನೇ ಸ್ಥಾನದಲ್ಲಿದೆ.

ಸಿಡ್ನಿ, ಟೋಕಿಯೊ ಮತ್ತು ಸೋಲ್‌ ಅತಿ ದುಬಾರಿ ನಗರಗಳಾಗಿದ್ದು, ಸಿಂಗಪುರವು 2ನೇ ಸ್ಥಾನದಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.