ADVERTISEMENT

ಎಫ್‌ಪಿಒಗಳಿಂದ ನೇರ ಖರೀದಿಗೆ ದೇವೇಶ್ ಚತುರ್ವೇದಿ ಸಲಹೆ

ಪಿಟಿಐ
Published 24 ನವೆಂಬರ್ 2025, 19:58 IST
Last Updated 24 ನವೆಂಬರ್ 2025, 19:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹೋಟೆಲ್‌ಗಳು ಹಾಗೂ ರೆಸ್ಟಾರೆಂಟ್‌ಗಳು ತಮಗೆ ಅಗತ್ಯವಿರುವ ಉತ್ಪನ್ನಗಳನ್ನು ರೈತ ಉತ್ಪಾದಕ ಸಂಘಗಳಿಂದ (ಎಫ್‌ಪಿಒ) ನೇರವಾಗಿ ಖರೀದಿಸಬೇಕು ಎಂದು ಕೇಂದ್ರ ಕೃಷಿ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಸೋಮವಾರ ಸಲಹೆ ನೀಡಿದ್ದಾರೆ.

ಹೀಗೆ ಮಾಡುವುದರಿಂದ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತದೆ, ಪೂರೈಕೆ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳ ಪಾತ್ರವನ್ನು ನಿವಾರಿಸಲು ಆಗುತ್ತದೆ ಎಂದು ಅವರು ಹೇಳಿದ್ದಾರೆ.

‘ದೇಶದಲ್ಲಿ ಹೋಟೆಲ್‌, ರೆಸ್ಟಾರೆಂಟ್‌ಗಳ ಸಂಖ್ಯೆ ದೊಡ್ಡದಿದೆ. ಅವರು ಸ್ಥಳೀಯ ರೈತರ ಜೊತೆ ಪಾಲುದಾರಿಕೆ ಹೊಂದಲು ಸಾಧ್ಯವಾದರೆ ಅವರಿಗೂ ರೈತರಿಗೂ ಒಳ್ಳೆಯದಾಗುತ್ತದೆ’ ಎಂದು ಚತುರ್ವೇದಿ ಅವರು ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಕೇಂದ್ರ ಸರ್ಕಾರವು ವೆಬ್‌ ಆಧಾರಿತ ವೇದಿಕೆಯೊಂದನ್ನು ಆರಂಭಿಸುವ ಉದ್ದೇಶ ಹೊಂದಿದ್ದು, ಅದರ ಮೂಲಕ ಎಫ್‌ಪಿಒಗಳು ತಮ್ಮಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಬಹುದು. ಆ ಉತ್ಪನ್ನಗಳನ್ನು ಉದ್ದಿಮೆಗಳು, ಹೋಟೆಲ್‌ಗಳು, ರೆಸ್ಟಾರೆಂಟ್‌ಗಳು ನೇರವಾಗಿ ಖರೀದಿಸಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.