ADVERTISEMENT

6 ತಿಂಗಳ ಬಳಿಕ ಡೀಸೆಲ್‌ ದರ ಇಳಿಕೆ

ಪಿಟಿಐ
Published 3 ಸೆಪ್ಟೆಂಬರ್ 2020, 14:28 IST
Last Updated 3 ಸೆಪ್ಟೆಂಬರ್ 2020, 14:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳುಆರು ತಿಂಗಳ ಬಳಿಕ ಡೀಸೆಲ್‌ ದರ ಇಳಿಕೆ ಮಾಡಿವೆ. ದೆಹಲಿಯಲ್ಲಿ ಡೀಸೆಲ್ ದರಗುರುವಾರ 16 ಪೈಸೆ ಇಳಿಕೆ ಆಗಿದ್ದು, ಲೀಟರ್‌ ದರ ₹ 73.40ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ 17 ಪೈಸೆ ಇಳಿಕೆಯಾಗಿ ₹ 77.71ರಂತೆ ಮಾರಾಟವಾಗಿದೆ.

ಆಗಸ್ಟ್‌ನ ಮಧ್ಯಭಾಗದಿಂದ ಪೆಟ್ರೋಲ್‌ ದರ ಪೈಸೆಗಳ ಲೆಕ್ಕದಲ್ಲಿ ಹೆಚ್ಚಾಗುತ್ತಲೇ ಇದೆ. ಗುರುವಾರ ಯಾವುದೇ ಏರಿಕೆ ಕಂಡಿಲ್ಲ. ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ದರ ₹ 84.75 ಇದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಆಗಿದ್ದಾಗ, ಕೇಂದ್ರ ಸರ್ಕಾರವು ತೈಲೋತ್ಪನ್ನಗಳ ಮೇಲಿನ ಎಕ್ಸೈಸ್‌ ಸುಂಕ ಹೆಚ್ಚಿಸಿತ್ತು. ಅದರಿಂದಾಗಿ ಗ್ರಾಹಕರಿಗೆ ಸುಂಕ ಏರಿಕೆಯ ಹೊರೆ ಬೀಳದಿದ್ದರೂ, ದರ ಇಳಿಕೆ ಪ್ರಯೋಜನ ಸಿಗದಂತಾಗಿತ್ತು. ಆದರೆ, ಕಂಪನಿಗಳು ಮಾರ್ಚ್‌ ತಿಂಗಳ ಮಧ್ಯಭಾಗದಿಂದ 82 ದಿನಗಳವರೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆ ಮಾಡಿದವು.

ADVERTISEMENT

ಜೂನ್‌ 7 ರಿಂದ ಜುಲೈ 25ರವರೆಗೆ ಡೀಸೆಲ್‌ ದರ ಪ್ರತಿ ಲೀಟರಿಗೆ ₹ 12.55ರಷ್ಟು ಹೆಚ್ಚಾಗಿದೆ. ದೆಹಲಿ ಹೊರತುಪಡಿಸಿ ಉಳಿದೆಡೆ ಜುಲೈ 25ರಿಂದ ಡೀಸೆಲ್‌ ದರದಲ್ಲಿ ಬದಲಾವಣೆ ಆಗಿರಲಿಲ್ಲ. ದೆಹಲಿಯಲ್ಲಿ ಪ್ರತಿ ಲೀಟರ್‌ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ₹ 8.38ರಷ್ಟು ಕಡಿಮೆ ಮಾಡಲಾಗಿತ್ತು.

ಪೆಟ್ರೋಲ್‌ ದರ ಜೂನ್ 7ರಿಂದ ಜೂನ್‌ 29ರವರೆಗೆ ಪ್ರತಿ ಲೀಟರಿಗೆ ₹ 9.17ರಷ್ಟು ಹೆಚ್ಚಾಗಿತ್ತು. ಬಳಿಕ ಆಗಸ್ಟ್‌ನಿಂದ ಇಲ್ಲಿಯವರೆಗೆ ಲೀಟರಿಗೆ ₹ 1.51ರಷ್ಟು ಹೆಚ್ಚಾಗಿದೆ. ಜೂನ್‌ 7ರಿಂದ ಇಲ್ಲಿಯವರೆಗೆ ಪೆಟ್ರೋಲ್‌ ದರ ಲೀಟರಿಗೆ ಒಟ್ಟಾರೆ ₹ 10.68ರಷ್ಟು ಏರಿಕೆಯಾಗಿದೆ.

ನಗರಗಳಲ್ಲಿನ ದರ (ಲೀಟರಿಗೆ)

ನಗರ;ಪೆಟ್ರೋಲ್‌;ಡೀಸೆಲ್‌

ಬೆಂಗಳೂರು;₹ 84.75;₹ 77.71

ದೆಹಲಿ;₹82.08;₹73.40

ಮುಂಬೈ;₹88.73;₹79.94

ಕೋಲ್ಕತ್ತ;₹83.57;₹77.06

ಚೆನ್ನೈ;₹85.04;₹78.71

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.