ADVERTISEMENT

ಡೀಸೆಲ್‌ ಬೆಲೆ ₹ 10 ತುಟ್ಟಿ

ಏಜೆನ್ಸೀಸ್
Published 23 ಜೂನ್ 2020, 18:16 IST
Last Updated 23 ಜೂನ್ 2020, 18:16 IST

ನವದೆಹಲಿ:ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ನಿರಂತರ ಬೆಲೆ ಏರಿಕೆಯಿಂದ 17 ದಿನಗಳಲ್ಲಿ ಡೀಸೆಲ್‌ ದರ ಪ್ರತಿ ಲೀಟರ್‌ಗೆ ₹ 10.01ರಷ್ಟು ತುಟ್ಟಿಯಾಗಿ ಪರಿಣಮಿಸಿದೆ.

ಮಂಗಳವಾರ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಕ್ರಮವಾಗಿ 20 ಪೈಸೆ ಮತ್ತು 55 ಪೈಸೆಗಳಂತೆ ಹೆಚ್ಚಿಸಲಾಗಿದೆ. ಪೆಟ್ರೋಲ್‌ ಬೆಲೆ ₹ 8.50ರಷ್ಟು ತುಟ್ಟಿಯಾಗಿದೆ.

ಬೆಂಗಳೂರಿನಲ್ಲಿ ಈಗ ಪೆಟ್ರೋಲ್‌ ಬೆಲೆ ₹ 82.32ಕ್ಕೆ ಮತ್ತು ಡೀಸೆಲ್‌ ಬೆಲೆ ₹ 75.59ಕ್ಕೆ ತಲುಪಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.