ADVERTISEMENT

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಡಿಜಿಟಲ್‌ ಪೇಮೆಂಟ್‌ ಬಳಸಿ: ಮೋದಿ ಸಲಹೆ 

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 6:34 IST
Last Updated 22 ಮಾರ್ಚ್ 2020, 6:34 IST
   

ಬೆಂಗಳೂರು: ಕೊರೊನಾ ವೈರಸ್‌ ವ್ಯಾಪಿಸುತ್ತಿರುವ, ಅದನ್ನು ತಡೆಯಲೆಂದು ಜನತಾ ಕರ್ಫ್ಯೂ ಜಾರಿಯಲ್ಲಿರುವ ಈ ಹೊತ್ತಿನಲ್ಲಿ ಜನ ಯಾವುದೇ ವ್ಯವಹಾರ ಮಾಡುವುದಿದ್ದರೂ ಡಿಜಿಟಲ್‌ ಪೇಮೆಂಟ್‌ ಮಾರ್ಗ ಬಳಸುವುದು ಸೂಕ್ತ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ಉದ್ಯಮಿ ಮೋಹನ್‌ ದಾಸ್‌ ಪೈ ಅವರು ಕೊರೊನಾ ವೈರಸ್‌ನಿಂದ ದೂರವಿರಲು ಡಿಜಿಟಲ್‌ ಪೇಮೆಂಟ್‌ನ ಅಗತ್ಯತೆ ಮತ್ತು ಉಪಯುಕ್ತತೆ ಬಗ್ಗೆ ವಿಡಿಯೊ ಮಾಡಿ ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ’ ಸುರಕ್ಷಿತವಾಗಿ ಪಾವತಿಸಿ, ಸುರಕ್ಷಿತವಾಗಿರಿ,’ ಎಂಬ ಅನಿಸಿಕೆಯುಳ್ಳ ಅವರ ವಿಡಿಯೊವನ್ನು ಮೋದಿ ತಮ್ಮ ಟ್ವಿಟರ್‌ ಖಾತೆಯಲ್ಲಿ ರೀಟ್ವೀಟ್‌ ಮಾಡಿಕೊಂಡಿದ್ದಾರೆ.

‘ಸಾಮಾಜಿ ಅಂತರವನ್ನು ಕಾಯ್ದುಕೊಳ್ಳಲು ಇದು ಸಕಾಲ. ಅದಕ್ಕೆ ಡಿಜಿಟಲ್‌ ಪೇಮೆಂಟ್‌ ಸಹಕಾರಿ,’ ಎಂದು ನರೇಂದ್ರ ಮೋದಿ ತಮ್ಮ ರೀಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.