ADVERTISEMENT

ನೇರ ತೆರಿಗೆ ಶೇ 15ರಷ್ಟು ಹೆಚ್ಚಳ ನಿರೀಕ್ಷೆ

2019-20ನೇ ಹಣಕಾಸು ವರ್ಷ; ರೆವಿನ್ಯೂ ಕಾರ್ಯದರ್ಶಿ ಹೇಳಿಕೆ

ಪಿಟಿಐ
Published 4 ಫೆಬ್ರುವರಿ 2019, 18:49 IST
Last Updated 4 ಫೆಬ್ರುವರಿ 2019, 18:49 IST

ನವದೆಹಲಿ: ‘2019-20ನೇ ಹಣಕಾಸು ವರ್ಷಕ್ಕೆ ನೇರ ತೆರಿಗೆಯಿಂದ ₹ 13.80 ಲಕ್ಷ ಕೋಟಿ ಸಂಗ್ರಹವಾಗಲಿದ್ದು,ಪ್ರಗತಿಯಲ್ಲಿ ಶೇ 15ರಷ್ಟು ವಾಸ್ತವ ಗುರಿ ತಲುಪಲಿದೆ’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.

ಸತತ ಮೂರು ಹಣಕಾಸು ವರ್ಷಗಳಲ್ಲಿ ವರಮಾನ ಪ್ರಗತಿ ಉತ್ತಮವಾಗಿದ್ದರೆ ವಾಸ್ತವ ಅಂದಾಜು ಮಾಡಬಹುದು ಎಂದಿದ್ದಾರೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹದ ಪ್ರಮಾಣ ಶೇ 20ರಷ್ಟಿರುವ ಅಂದಾಜು ಮಾಡಲಾಗಿದೆ. ಮುಂದಿನ ವರ್ಷ ಶೇ 15ರಷ್ಟು ಪ್ರಗತಿ ಸಾಧಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ADVERTISEMENT

‘ತೆರಿಗೆ ಪಾವತಿಸುವವರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿರುವುದರಿಂದ ತೆರಿಗೆ ವ್ಯಾಪ್ತಿ ಹಿಗ್ಗುತ್ತಿದೆ. ಡಿಜಿಟಲ್‌ ವ್ಯವಸ್ಥೆಯೂ ಪೂರಕವಾಗಿದೆ. ಹೀಗಾಗಿ ನಿರೀಕ್ಷಿತ ಗುರಿ ತಲುಪುವ ಭರವಸೆ ಇದೆ.

ನಿರೀಕ್ಷೆಗೂ ಮೀರಿ ಸಂಗ್ರಹ

ಪ್ರಸಕ್ತ ಹಣಕಾಸು ವರ್ಷದಲ್ಲಿನೇರತೆರಿಗೆಯು ಗುರಿ ಮೀರಿ ಸಂಗ್ರಹವಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.₹ 11.50 ಲಕ್ಷ ಕೋಟಿ ಸಂಗ್ರಹವಾಗಲಿದೆ ಎಂದು ಬಜೆಟ್‌ನಲ್ಲಿ ಅಂದಾಜು ಮಾಡಲಾಗಿತ್ತು. ಆದರೆ, ₹ 12 ಲಕ್ಷ ಕೋಟಿ ಅಂದರೆ ₹ 50 ಸಾವಿರ ಕೋಟಿ ಹೆಚ್ಚುವರಿ ಸಂಗ್ರಹವಾಗಿದೆ.

ಕಸ್ಟಮ್ಸ್‌ ಸುಂಕ ₹ 1.12 ಲಕ್ಷ ಕೋಟಿ ಸಂಗ್ರಹವಾಗುವ ಅಂದಾಜು ಮಾಡಲಾಗಿತ್ತು. ಇದು ₹ 1.30 ಲಕ್ಷ ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.