ADVERTISEMENT

ಅಗ್ಗದ ಟಿವಿಗೆ ತೆರೆದ ‘ಬಾಗಿಲು’: ಡೋರ್ ಟಿವಿ FlipKartನಲ್ಲಿ ಡಿ.1ರಿಂದ ಲಭ್ಯ

ಎಂ.ಮಹೇಶ
Published 29 ನವೆಂಬರ್ 2024, 0:56 IST
Last Updated 29 ನವೆಂಬರ್ 2024, 0:56 IST
ಮೈಂಬೈನಲ್ಲಿ ಡೋರ್‌ ಟಿವಿ ಬಿಡುಗಡೆ ಮಾಡಿದ ಮೈಕ್ರೋಮ್ಯಾಕ್ಸ್‌ ಇನ್ಫರ್ಮ್ಯಾಟಿಕ್ಸ್‌ ಕಂಪನಿಯ ಸಹ–ಸಂಸ್ಥಾಪಕ ರಾಹುಲ್‌ ಶರ್ಮಾ ಮತ್ತು ಸ್ಟ್ರೀಮ್‌ಬಾಕ್ಸ್‌ ಮೀಡಿಯಾ ಸಿಇಒ ಅನುಜ್ ಗಾಂಧಿ
ಮೈಂಬೈನಲ್ಲಿ ಡೋರ್‌ ಟಿವಿ ಬಿಡುಗಡೆ ಮಾಡಿದ ಮೈಕ್ರೋಮ್ಯಾಕ್ಸ್‌ ಇನ್ಫರ್ಮ್ಯಾಟಿಕ್ಸ್‌ ಕಂಪನಿಯ ಸಹ–ಸಂಸ್ಥಾಪಕ ರಾಹುಲ್‌ ಶರ್ಮಾ ಮತ್ತು ಸ್ಟ್ರೀಮ್‌ಬಾಕ್ಸ್‌ ಮೀಡಿಯಾ ಸಿಇಒ ಅನುಜ್ ಗಾಂಧಿ   

ಮುಂಬೈ: ಸ್ಟ್ರೀಮ್‌ಬಾಕ್ಸ್‌ ಮೀಡಿಯಾ ಹಾಗೂ ಮೈಕ್ರೋಮ್ಯಾಕ್ಸ್‌ ಇನ್ಫರ್ಮ್ಯಾಟಿಕ್ಸ್‌ ಲಿಮಿಟೆಡ್ ಸಹಯೋಗದಲ್ಲಿ ‘ಹಲವು ಚಂದಾದಾರಿಕೆಗಳನ್ನು ಒಳಗೊಂಡಿರುವ ‘ಡೋರ್‌’ (ಡಿಒಆರ್) ಸ್ಮಾರ್ಟ್‌ ಟಿವಿಯನ್ನು ಬಿಡುಗಡೆ ಮಾಡಲಾಯಿತು.

ಇಲ್ಲಿನ ಬಾಂದ್ರಾದಲ್ಲಿರುವ ನೀತಾ ಮುಖೇಶ್ ಅಂಬಾನಿ ಕಲ್ಚರಲ್‌ ಸೆಂಟರ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ, ತಮ್ಮ ಹೊಸ ಯೋಜನೆ ಘೋಷಿಸಿದ ಸ್ಟ್ರೀಮ್‌ಬಾಕ್ಸ್‌ ಮೀಡಿಯಾ ಸಿಇಒ ಅನುಜ್ ಗಾಂಧಿ ಮತ್ತು ಮೈಕ್ರೋಮ್ಯಾಕ್ಸ್‌ ಇನ್ಫರ್ಮ್ಯಾಟಿಕ್ಸ್‌ ಕಂಪನಿಯ ಸಹ–ಸಂಸ್ಥಾಪಕ ರಾಹುಲ್‌ ಶರ್ಮಾ, ‘ಡೋರ್, ದೇಶದ ಮೊದಲ ಚಂದಾದಾರಿಕೆ ಟಿವಿ ಸೇವೆ ಆಗಿದೆ. ಹಲವು ಒಟಿಟಿಗಳ ಚಂದಾದಾರಿಕೆಗೆ ಪ್ರತ್ಯೇಕವಾಗಿ ಹಣ ಕಟ್ಟಿ ಪಡೆದುಕೊಳ್ಳುವ ಅಗತ್ಯ ಇರುವುದಿಲ್ಲ’ ಎಂದು ಮಾಹಿತಿ ನೀಡಿದರು.

‘43, 55 ಹಾಗೂ 65 ಇಂಚಿನ ಅಳತೆಯ ಟಿವಿಗಳನ್ನು ವಿನ್ಯಾಸಗೊಳಿಸಲಾಗಿದೆ. 43 ಇಂಚಿನ ಟಿವಿಯು ಡಿ.1ರಿಂದ ಫ್ಲಿಪ್‌ಕಾರ್ಟ್‌ ವೇದಿಕೆಯಲ್ಲಿ ಖರೀದಿಗೆ ಲಭ್ಯವಿದೆ. ಶೀಘ್ರದಲ್ಲೇ ಟಿವಿ ಮಳಿಗೆಗಳಲ್ಲೂ ದೊರೆಯಲಿದೆ. 55 ಹಾಗೂ 65 ಇಂಚಿನ ಅಳತೆಯ ಟಿವಿಗಳನ್ನು 2025ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಏಕ್‌ ಸೈನ್‌ಇನ್‌ ಹಾಗೂ ಏಕ್‌ ಚಂದಾದಾರಿಕೆಯ ಡೋರ್ ಟಿವಿಯು ಪ್ರೈಮ್‌ ವಿಡಿಯೊ, ಜಿಯೋ ಸಿನಿಮಾ, ಡಿಸ್ನಿ ಹಾಟ್‌ಸ್ಟಾರ್, ಝೀ5, ಸೋನಿ ಲಿವ್, ಯೂಟ್ಯೂಬ್, ಡಿಸ್ಕವರಿ ಫಸ್ಟ್‌, ಸನ್‌ ನೆಕ್ಸ್ಟ್‌, ಹಂಗಾಮ ಸೇರಿದಂತೆ 24+ ಒಟಿಟಿಗಳು ಹಾಗೂ 300ಕ್ಕೂ ಅಧಿಕ ವಾಹನಿಗಳನ್ನು ಒಳಗೊಂಡಿರುತ್ತದೆ. ಸುಧಾರಿತ ಕ್ಯೂಎಲ್‌ಇಡಿ, 4ಕೆ ಅಲ್ಟ್ರಾ ಎಚ್‌ಡಿ, ಡಾಲ್ಬಿ ಆಡಿಯೊ ಮೊದಲಾದ ತಂತ್ರಜ್ಞಾನಗಳನ್ನು ಹೊಂದಿದೆ. ಸೋಲಾರ್‌ರಿಮೋಟ್ ಈ ಟಿವಿಯ ವಿಶೇಷ. ಚಂದಾದಾರರಾದವರು ಐದು ಮೊಬೈಲ್‌ ಫೋನ್‌ಗಳಲ್ಲೂ ಡೌಲ್‌ಲೋಡ್‌ ಮಾಡಿಕೊಳ್ಳಲು ಅವಕಾಶವಿದೆ. 4 ವರ್ಷ ವಾರಂಟಿ ಹಾಗೂ 4 ವರ್ಷ ಒಎಸ್‌ ಅಪ್‌ಡೇಟ್‌ ಗ್ಯಾರಂಟಿಯನ್ನೂ ನೀಡುತ್ತಿದ್ದೇವೆ’ ಎಂದು ಹೇಳಿದರು.

‘43 ಇಂಚಿನ ಟಿವಿಗೆ ಮುಂಗಡ ಸಕ್ರಿಯಗೊಳಿಸುವಿಕೆ ಶುಲ್ಕ ₹10,799 (ಪ್ರತಿ ತಿಂಗಳಿಗೆ ₹799 ಚಂದಾದಾರಿಕೆ ಶುಲ್ಕ ಸಹಿತ) ನಿಗದಿಪಡಿಸಲಾಗಿದೆ. 12 ತಿಂಗಳ ನಂತರ ಗ್ರಾಹಕರು ತಮಗೆ ಬೇಕಾದ ಪ್ಯಾಕೇಜ್‌ ಆಯ್ಕೆ ಮಾಡಿಕೊಳ್ಳಬಹುದು’ ಎಂದರು.

‘ಸಂಯೋಜಿತ ವೇದಿಕೆಗಳ ಮತ್ತು ಚಂದಾದಾರಿಕೆ ಸಹಿತವಾಗಿ ಇಷ್ಟೊಂದು ಕಡಿಮೆ ಬೆಲೆಗೆ ಟಿವಿ ಸಿಗುತ್ತಿರುವುದು ಮಾರುಕಟ್ಟೆಯಲ್ಲಿ ಇದೇ ಮೊದಲು. ಭಾರತದ ಕಂಪನಿಗಳ ಈ ಆವಿಷ್ಕಾರವು ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಲಿದೆ. ಕೃತಕ ಬುದ್ಧಿಮತ್ತೆ (ಎಐ) ಆಧರಿಸಿ ‘ಆಸ್ಕ್ ಡೋರ್’ ವಿಭಾಗದಲ್ಲಿ ಬಯಸಿದ ಒಟಿಟಿ, ವಾಹಿನಿ ಅಥವಾ ವಿಷಯವನ್ನು ತ್ವರಿತವಾಗಿ ಪಡೆದುಕೊಳ್ಳಬಹುದು. ಮಕ್ಕಳಿಗೆಂದೇ ಪ್ರತ್ಯೇಕ ವಿಭಾಗವಿದೆ. ಎಲ್ಲವೂ ಸರಳವಾಗಿ ಸಿಗುವಂತೆ ವಿನ್ಯಾಸಗೊಳಿಸಲಾಗಿದೆ’ ಎಂದು ವಿವರಿಸಿದರು.

‘ನೆಟ್‌ಫ್ಲೆಕ್ಸ್‌’ ಒಟಿಟಿಯನ್ನೂ ಡೋರ್‌ನಲ್ಲಿ ಸೇರಿಸಲು ಪ್ರಯತ್ನ ನಡೆದಿದೆ’ ಎಂದು ಪ್ರತಿಕ್ರಿಯಿಸಿದರು.

ಹೆಚ್ಚಿನ ಮಾಹಿತಿಗೆ www.dorworld.in.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.