ADVERTISEMENT

ಡ್ಯುರೊಫ್ಲೆಕ್ಸ್‌: ₹ 2,000 ಕೋಟಿ ವಹಿವಾಟಿನ ಗುರಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 20:06 IST
Last Updated 18 ಏಪ್ರಿಲ್ 2021, 20:06 IST
ಜಯನಗರದಲ್ಲಿ ಆರಂಭಿಸಿರುವ ಡ್ಯುರೊಫ್ಲೆಕ್ಸ್‌ನ ‘ಎಕ್ಸ್‌ಪಿರೀಯನ್ಸ್‌ ಸೆಂಟರ್‌ನ ನೋಟ
ಜಯನಗರದಲ್ಲಿ ಆರಂಭಿಸಿರುವ ಡ್ಯುರೊಫ್ಲೆಕ್ಸ್‌ನ ‘ಎಕ್ಸ್‌ಪಿರೀಯನ್ಸ್‌ ಸೆಂಟರ್‌ನ ನೋಟ   

ಬೆಂಗಳೂರು: ವಿವಿಧ ಶ್ರೇಣಿಯಮತ್ತು ಸುಖಕರ ನಿದ್ದೆಗೆ ನೆರವಾಗುವ ಮ್ಯಾಟ್ರೆಸ್‌ಗಳನ್ನು ತಯಾರಿಸುವಡ್ಯುರೊಫ್ಲೆಕ್ಸ್‌ ಕಂಪನಿಯು ತನ್ನ ಎಕ್ಸ್‌ಪಿರೀಯನ್ಸ್‌ ಸೆಂಟರ್‌ಗಳ ವಿಸ್ತರಣೆಯೊಂದಿಗೆ 2025ರ ವೇಳೆಗೆ ₹ 2,000 ಕೋಟಿ ವಹಿವಾಟಿನ ಗುರಿ ಹಾಕಿಕೊಂಡಿದೆ.

ಬೆಂಗಳೂರಿನ ಜಯನಗರದಲ್ಲಿ ಕಂಪನಿಯ ಮೂರನೇ ಎಕ್ಸ್‌ಪಿರೀಯನ್ಸ್‌ ಸೆಂಟರ್‌ ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ಕಂಪನಿಯ ವಹಿವಾಟು ವಿಸ್ತರಣೆ ಬಗ್ಗೆ ಮಾತನಾಡಿರುವ ಡ್ಯುರೊಫ್ಲೆಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮ್ಯಾಥ್ಯೂ ಚಾಂಡಿ ಅವರು ಈ ವಿಷಯ ತಿಳಿಸಿದ್ದಾರೆ.

‘ನೆಮ್ಮದಿಯ ನಿದ್ರೆಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಭಾರತದ ಮುಂಚೂಣಿ ಸಂಸ್ಥೆಯಾದ ಡ್ಯೂರೊಫ್ಲೆಕ್ಸ್
ಜಯನಗರದಲ್ಲಿ ಆರಂಭಿಸಿರುವ ಈ ‘ಎಕ್ಸ್‌ಪಿರೀಯನ್ಸ್‌ ಸೆಂಟರ್‌‘,ಗ್ರಾಹಕರಿಗೆ ಡ್ಯೂರೊಫ್ಲೆಕ್ಸ್‌ನ ವಿಶೇಷ ಸೇವೆಗಳು ಹಾಗೂ ಅನುಭವಗಳನ್ನು ಪರಿಚಯಿಸಲುನೆರವಾಗಲಿದೆ. ಕೋರಮಂಗಲ ಹಾಗೂ ವೈಟ್‍ಫೀಲ್ಡ್‌ನಲ್ಲಿ ಆರಂಭಿಸಲಾಗಿರುವ ಎಕ್ಸ್‌ಪಿರೀಯನ್ಸ್‌ ಸೆಂಟರ್‌ಗಳಿಗೆ ಗ್ರಾಹಕರಿಂದ ದೊರೆತಿರುವ ಉತ್ತೇಜಕರ ಪ್ರತಿಕ್ರಿಯೆಯಿಂದ ಪ್ರೇರಣೆ ಪಡೆದು ಈ ಮೂರನೇ ಎಕ್ಸ್‌ಪಿರೀಯನ್ಸ್‌ ಸೆಂಟರ್‌ ಆರಂಭಿಸಲಾಗಿದೆ.

ADVERTISEMENT

‘ವೈದ್ಯರು ಶಿಫಾರಸು ಮಾಡಿರುವ ಬ್ರ್ಯಾಂಡ್‍ನ ಸಿಗ್ನೇಚರ್ ಶ್ರೇಣಿಯಾದ ಅರ್ಥೊಪೆಡಿಕ್ ಮ್ಯಾಟ್ರೆಸ್ ಡ್ಯೂರೋಪೆಡಿಕ್ ಶ್ರೇಣಿಯಿಂದ ಹಿಡಿದು ಹೆಚ್ಚು ದಕ್ಷತೆಯ ಎನರ್ಜೈಜ್ ಶ್ರೇಣಿ ಮತ್ತು ಪ್ರೀಮಿಯಂ ಪರಿಸರ ಸ್ನೇಹಿಯಾದ ನ್ಯಾಚುರಲ್ ಲಿವಿಂಗ್ಶ್ರೇ ಣಿಗಳು ಸೇರಿದಂತೆ, ಗ್ರಾಹಕರು ಇಲ್ಲಿ ಡ್ಯೂರೊಫ್ಲೆಕ್ಸ್‌ನ ವಿಶಿಷ್ಟ ಮತ್ತು ವ್ಯಾಪಕ ಶ್ರೇಣಿಯ ಉತ್ಪನ್ನಗಳ ಅನುಭವವನ್ನು ಪಡೆದುಕೊಳ್ಳಬಹುದು.

‘ಡಿಸೈನರ್ ಹಾಸಿಗೆಗಳು ಮತ್ತು ಸ್ಥಳ ಉಳಿತಾಯ ಮಾಡುವ ಸ್ಟಡಿ/ವರ್ಕ್ ಡೆಸ್ಕ್‌ಗಳೂ ಒಳಗೊಂಡಂತೆ, ಡ್ಯೂರೊಫ್ಲೆಕ್ಸ್‌ ಹೊಸದಾಗಿ ಪ್ರಾರಂಭಿಸಿರುವ ಪೀಠೋಪಕರಣಗಳ ಶ್ರೇಣಿಯನ್ನೂ ಈ ‘ಎಕ್ಸ್‌ಪಿರೀಯನ್ಸ್‌ ಸೆಂಟರ್‌‘ ಹೊಂದಿದೆ.
ನಿದ್ರೆಯ ಮಹತ್ವದ ಕುರಿತು ಹೆಚ್ಚು ಹೆಚ್ಚು ಜನರು ಅರಿವು ಪಡೆದುಕೊಳ್ಳುತ್ತಿರುವಂತಹ ಸಂದರ್ಭದಲ್ಲಿ, ಹಾಸಿಗೆ ತಯಾರಿಕೆ ಉದ್ದಿಮೆಯು ಹೆಚ್ಚಿನ ಬೆಳವಣಿಗೆ ಕಾಣುತ್ತಿದೆ. ಕೋವಿಡ್‌ ಪಿಡುಗಿನಿಂದಾಗಿ ಜನರಲ್ಲಿ ನೆಮ್ಮದಿಯ ನಿದ್ರೆ, ನಿರೋಧಕ ಶಕ್ತಿ ಹೆಚ್ಚಳ ಮತ್ತು ಒಟ್ಟಾರೆ ಆರೋಗ್ಯದ ಕುರಿತು ಹೆಚ್ಚುತ್ತಿರುವ ಜಾಗೃತಿಯಿಂದಾಗಿ ಜನರು ವಿಶ್ವಸನೀಯ ಬ್ರ್ಯಾಂಡ್‍ನಿಂದ ವಿನೂತನ ಮತ್ತು ಸುಖ ನಿದ್ರೆಗೆ ಸೂಕ್ತವಾದ ಹಾಸಿಗೆಗಳನ್ನು ಹೆಚ್ಚೆಚ್ಚು ನಿರೀಕ್ಷಿಸುತ್ತಿದ್ದುಅಂತಹಅಗತ್ಯಗಳನ್ನು ಡ್ಯುರೊಫ್ಲೆಕ್ಸ್‌ ಒದಗಿಸುತ್ತಿದೆ’ ಎಂದು ಹೇಳಿದ್ದಾರೆ.
ಗ್ರಾಹಕರ ಸುರಕ್ಷತೆ ಗಮನದಲ್ಲಿರಿಸಿಕೊಂಡು, ಹ್ಯಾಂಡ್ ಸ್ಯಾನಿಟೈಸರ್‌, ಕಟ್ಟುನಿಟ್ಟಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮ್ಯಾಟ್ರೆಸ್ ಪರೀಕ್ಷೆಗೆ ಒಮ್ಮೆ ಬಳಸಿ ಎಸೆಯಬಹುದಾದ ಹೊದಿಕೆಗಳು ಮತ್ತು ಉದ್ಯೋಗಿಗಳು ಹಾಗೂ ಗ್ರಾಹಕರಿಗೆ ತಾಪಮಾನ ಪರೀಕ್ಷೆಯಂತಹ ವ್ಯಾಪಕ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.