ADVERTISEMENT

ಹೊಸ ನಿಯಮ ಇ–ಕಾಮರ್ಸ್‌ಗೆ ಮಾರಕ ಅಲ್ಲ: ಆರ್. ಚಂದ್ರಶೇಖರ್‌

ಪಿಟಿಐ
Published 27 ಡಿಸೆಂಬರ್ 2018, 17:27 IST
Last Updated 27 ಡಿಸೆಂಬರ್ 2018, 17:27 IST

ಹೈದರಾಬಾದ್‌: ‘ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ನಿಯಮವು ಇ–ಕಾಮರ್ಸ್‌ ಕಂಪನಿಗಳಿಗೆ ಮಾರಕ ಅಲ್ಲ. ಅದರಿಂದ ಮಾರುಕಟ್ಟೆಯಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ’ ಎಂದು ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟದ (ನಾಸ್ಕಾಂ) ಮಾಜಿ ಅಧ್ಯಕ್ಷ ಆರ್. ಚಂದ್ರಶೇಖರ್‌ ತಿಳಿಸಿದ್ದಾರೆ.

ಎಂಎಸ್‌ಎಂಇಗೆ ಪ್ರಯೋಜನ:‘ಡಿಜಿಟಲ್ ಆರ್ಥಿಕತೆಯಲ್ಲಿ ಭಾಗವಹಿಸಲುಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (ಎಂಎಸ್‌ಎಂಇ) ಹೆಚ್ಚಿನ ಅವಕಾಶ ಸಿಗಲಿದೆ’ ಎಂದು ಇನ್‌ಸ್ಟಾಮೋಜೊ ಸಿಇಒ ಸಂಪದ್‌ ಸ್ವೈನ್‌ ತಿಳಿಸಿದ್ದಾರೆ.

‘ಸರ್ಕಾರದ ನಿರ್ಧಾರದಿಂದಎಲ್ಲಾ ವರ್ತಕರಿಗೂ ಇ–ಕಾಮರ್ಸ್‌ನಲ್ಲಿ ತಮ್ಮ ಉತ್ಪನ್ನಗಳನ್ನು ಮಾರಲು ಅವಕಾಶ ಸಿಗಲಿದೆ’ ಎಂದು ಸ್ನ್ಯಾಪ್‌ಡೀಲ್‌ ಕಂಪನಿಯ ಸಿಇಒ ಕುನಾಲ್‌ ಬಹ್ಲಾ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ಉತ್ತಮ ಹೆಜ್ಜೆ: ‘ಸಣ್ಣ ಮತ್ತು ಸ್ವತಂತ್ರ ವಹಿವಾಟುದಾರರ ಹಿತಾಸಕ್ತಿ ರಕ್ಷಣೆ ನಿಟ್ಟಿನಲ್ಲಿ ಇದೊಂದು ಉತ್ತಮ ಹೆಜ್ಜೆಯಾಗಿದೆ. ಬೆಲೆ ಕಡಿತದ ತೀವ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಹಿವಾಟುದಾರರು ಮತ್ತು ಕಿರಾಣಿ ವರ್ತಕರಿಗೆ ಸಮಾನ ಅವಕಾಶ ದೊರೆಯಲಿದೆ’ ಎಂದು ಮೆಟ್ರೊ ಕ್ಯಾಷ್‌ ಆ್ಯಂಡ್‌ ಕ್ಯಾರಿ ಸಿಇಒ ಅರವಿಂದ್‌ ಮೆಡಿರಟ್ಟಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.