ADVERTISEMENT

ಐದು ತಿಂಗಳ ನಂತರವೂ ಚೇತರಿಸಿಕೊಳ್ಳದ ಮೂಲಸೌಕರ್ಯ ವಲಯ

ಪಿಟಿಐ
Published 31 ಆಗಸ್ಟ್ 2020, 10:08 IST
Last Updated 31 ಆಗಸ್ಟ್ 2020, 10:08 IST
ಕಟ್ಟಡ ನಿರ್ಮಾಣ ಕಾಮಗಾರಿಯ ಪ್ರಾತಿನಿಧಿಕ ಚಿತ್ರ
ಕಟ್ಟಡ ನಿರ್ಮಾಣ ಕಾಮಗಾರಿಯ ಪ್ರಾತಿನಿಧಿಕ ಚಿತ್ರ    

ನವದೆಹಲಿ: ದೇಶದ ಮೂಲಸೌಕರ್ಯ ವಲಯದ ಬೆಳವಣಿಗೆ ಸತತ ಐದನೇ ತಿಂಗಳಿನಲ್ಲಿಯೂ ಇಳಿಮುಖವಾಗಿಯೇ ಇದೆ.

ಉಕ್ಕು, ತೈಲ ಸಂಸ್ಕರಣೆ ಮತ್ತು ಸಿಮೆಂಟ್‌ ಉತ್ಪಾದನೆಯಲ್ಲಿ ಹೆಚ್ಚು ಇಳಿಕೆ ಆಗಿರುವುದರಿಂದ 8 ಮೂಲಸೌಕರ್ಯ ವಲಯಗಳ ಬೆಳವಣಿಗೆಯು ಜುಲೈನಲ್ಲಿ ಶೇ 9.6ರಷ್ಟು ಇಳಿಕೆ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ರಸಗೊಬ್ಬರ ವಲಯವನ್ನು ಹೊರತುಪಡಿಸಿ, ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ತೈಲ ಸಂಸ್ಕರಣೆ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್‌ ವಲಯಗಳು ನಕಾರಾತ್ಮಕ ಬೆಳವಣಿಗೆ ಕಂಡಿವೆ.

ADVERTISEMENT

2020–21ರಲ್ಲಿ ಏಪ್ರಿಲ್‌–ಜುಲೈ ಅವಧಿಯಲ್ಲಿನ ಬೆಳವಣಿಗೆಯೂ ಶೇ 20.5ರಷ್ಟು ಇಳಿಕೆಯಾಗಿದೆ. 2019–20ರಲ್ಲಿ ಶೇ 3.2ರಷ್ಟು ಬೆಳವಣಿಗೆ ಆಗಿತ್ತು.

ಮೂಲಸೌಕರ್ಯದ ಬೆಳವಣಿಗೆ

ಮಾರ್ಚ್‌: -6.5%

ಏಪ್ರಿಲ್‌: -38.1%

ಮೇ: -23.4%

ಜೂನ್: -15%

ಜುಲೈ: -9.6%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.