ADVERTISEMENT

ಮೂಲಸೌಕರ್ಯ ವಲಯ ಗರಿಷ್ಠ ಮಟ್ಟಕ್ಕೆ

ಪಿಟಿಐ
Published 31 ಮಾರ್ಚ್ 2020, 20:15 IST
Last Updated 31 ಮಾರ್ಚ್ 2020, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಮೂಲಸೌಕರ್ಯ ವಲಯದ ಬೆಳವಣಿಗೆಯು ಫೆಬ್ರುವರಿಯಲ್ಲಿ ಶೇ 5.5ರಷ್ಟು ಬೆಳವಣಿಗೆ ದಾಖಲಿಸಿದ್ದು, ಇದು 11 ತಿಂಗಳ ಗರಿಷ್ಠ ಮಟ್ಟವಾಗಿದೆ.

ಈ ಹಿಂದೆ 2019ರ ಮಾರ್ಚ್‌ನಲ್ಲಿ ಶೇ 5.8ರಷ್ಟು ಬೆಳವಣಿಗೆ ಕಂಡಿತ್ತು.2019ರ ಫೆಬ್ರುವರಿಯಲ್ಲಿ ಶೇ 2.2ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಶೇ 3.6ರಷ್ಟು ಏರಿಕೆಯಾಗಿದೆ.

ಎಂಟು ಮೂಲಸೌಕರ್ಯ ವಲಯಗಳ ಪೈಕಿ, ಕಲ್ಲಿದ್ದಲು, ತೈಲಾಗಾರ ಮತ್ತು ವಿದ್ಯುತ್‌ ವಲಯಗಳ ತಯಾರಿಕೆ ಹೆಚ್ಚಾಗಿರುವುದರಿಂದ ಉತ್ತಮ ಪ್ರಗತಿ ಸಾಧ್ಯವಾಗಿದೆ.

ADVERTISEMENT

ದೇಶದ ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಈ 8 ವಲಯಗಳು ಶೇ 4.027ರಷ್ಟು ಕೊಡುಗೆ ನೀಡುತ್ತಿವೆ. ಫೆಬ್ರುವರಿಯಲ್ಲಿನ ಬೆಳವಣಿಯು ಐಐಪಿ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ಶೇ 1ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 4.2ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.