ADVERTISEMENT

ವಾಣಿಜ್ಯ ಉದ್ದೇಶ: ವಿದ್ಯುತ್‌ ಚಾಲಿತಕಾರ್‌, ಬೈಕ್‌ ಬಳಕೆಗೆ ಗಡುವು

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 19:45 IST
Last Updated 6 ಜೂನ್ 2019, 19:45 IST
ಇ–ವಾಹನ
ಇ–ವಾಹನ   

ನವದೆಹಲಿ: ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್‌ ಚಾಲಿತ ಹೊಸ ಕಾರ್‌ ಮತ್ತು ಬೈಕ್‌ಗಳನ್ನು ಹಂತ ಹಂತವಾಗಿ ಬಳಸುವುದನ್ನು ಜಾರಿಗೆ ತರಲು ನೀತಿ ಆಯೋಗವು ಗಡುವು ನಿಗದಿಪಡಿಸಿದೆ.

2026ರ ಏಪ್ರಿಲ್‌ನಿಂದ ವಾಣಿಜ್ಯ ಬಳಕೆಗೆ ಮಾರಾಟವಾಗುವ ಹೊಸ ಕಾರ್‌ಗಳು ಮತ್ತು 2023ರ ಏಪ್ರಿಲ್‌ನಿಂದ ಮಾರಾಟವಾಗುವ ಬೈಕ್‌ಗಳು ವಿದ್ಯುತ್‌ ಚಾಲಿತವಾಗಿರಬೇಕು ಎಂದು ಸರ್ಕಾರದ ಚಿಂತಕರ ಚಾವಡಿಯಾಗಿರುವ ನೀತಿ ಆಯೋಗದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಮೊಬೈಲ್‌ ಆ್ಯಪ್‌ ಆಧಾರಿತ ಬಾಡಿಗೆ ಟ್ಯಾಕ್ಸಿ ಸೇವೆಗಳಾದ ಓಲಾ ಮತ್ತು ಉಬರ್‌ನಂತಹ ಸಂಸ್ಥೆಗಳು ಹಂತ ಹಂತವಾಗಿ ವಿದ್ಯುತ್‌ ಚಾಲಿತ ಕಾರ್‌ಗಳನ್ನು ಬಳಕೆಗೆ ತರಬೇಕು. 2026ರಿಂದ ಇಂತಹ ಕಾರ್‌ಗಳ ಸಂಖ್ಯೆ ಶೇ 40ರಷ್ಟು ಜಾರಿಗೆ ಬರಬೇಕು ಎಂದು ಗಡುವು ವಿಧಿಸಲಾಗಿದೆ. ಮಾಲಿನ್ಯ ಮಟ್ಟವನ್ನು ಗಮನಾರ್ಹವಾಗಿ ತಗ್ಗಿಸಲು ಮತ್ತು ಪರಿಸರ ಸ್ನೇಹಿ ಶುದ್ಧ ಇಂಧನ ಬಳಕೆ ಹೆಚ್ಚಿಸಲು ಈ ನಿರ್ಧಾರಕ್ಕೆ ಬರಲಾಗಿದೆ.

ADVERTISEMENT

ಆಹಾರ ವಿತರಣೆ ಮತ್ತು ಇ–ಕಾಮರ್ಸ್‌ ಸಂಸ್ಥೆಗಳು ತಮ್ಮ ಸರಕುಗಳ ವಿತರಣೆಗೆ ಬಳಸುವ ಬೈಕ್‌ ಮತ್ತು ಸ್ಕೂಟರ್‌ಗಳು ಕೂಡ ವಿದ್ಯುತ್‌ ಚಾಲಿತವಾಗಿರಬೇಕು ಎಂದು ಮೇ 28 ರಂದು ಸಭೆ ಸೇರಿದ್ದ ನೀತಿ ಆಯೋಗದ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.