ADVERTISEMENT

ನಕಲಿ ಖಾತೆ ಟ್ವಿಟರ್ ಖರೀದಿಗೆ ಅಡ್ಡಿ?

ಏಜೆನ್ಸೀಸ್
Published 17 ಮೇ 2022, 16:57 IST
Last Updated 17 ಮೇ 2022, 16:57 IST
ಇಲಾನ್ ಮಸ್ಕ್
ಇಲಾನ್ ಮಸ್ಕ್   

ಲಂಡನ್: ಟ್ವಿಟರ್‌ ಖಾತೆಗಳ ಪೈಕಿ ನಕಲಿ ಖಾತೆಗಳ ಪ್ರಮಾಣವು ಶೇಕಡ 5ಕ್ಕಿಂತ ಕಡಿಮೆ ಎಂಬುದನ್ನು ಕಂಪನಿಯು ಸಾರ್ವಜನಿಕವಾಗಿ, ಆಧಾರ ಸಹಿತ ತೋರಿಸಿಕೊಟ್ಟರೆ ಮಾತ್ರ ಟ್ವಿಟರ್ ಖರೀದಿ ಪ್ರಕ್ರಿಯೆಯು ಮುಂದಕ್ಕೆ ಸಾಗುತ್ತದೆ ಎಂದು ಟೆಸ್ಲಾ ಕಂಪನಿಯ ಸಿಇಒ ಇಲಾನ್ ಮಸ್ಕ್ ಹೇಳಿದ್ದಾರೆ.

ಟ್ವಿಟರ್‌ನ ಬಳಕೆದಾರರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಯಾಗಿ ಮಸ್ಕ್ ಅವರು ಟ್ವೀಟ್ ಮೂಲಕವೇ ಈ ವಿಚಾರ ತಿಳಿಸಿದ್ದಾರೆ. ‘ನಕಲಿ ಖಾತೆಗಳ ಪ್ರಮಾಣ ಶೇ 5ರಷ್ಟು ಮಾತ್ರ ಎಂಬುದನ್ನು ಸಾಬೀತು ಮಾಡಲು ಟ್ವಿಟರ್‌ ಸಿಇಒ ಸಾರ್ವಜನಿಕವಾಗಿ ಹಿಂದೇಟು ಹಾಕಿದರು. ಅವರು ಅದನ್ನು ಸಾಬೀತು ಮಾಡದ ಹೊರತು ಒಪ್ಪಂದ ಮುಂದುವರಿಯದು’ ಎಂದು ಮಸ್ಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT