ADVERTISEMENT

ಇಎಂಐ ವಂಚನೆ; ಗ್ರಾಹಕರಿಗೆ ಎಚ್ಚರ

ಪಿಟಿಐ
Published 9 ಏಪ್ರಿಲ್ 2020, 19:31 IST
Last Updated 9 ಏಪ್ರಿಲ್ 2020, 19:31 IST

ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿರುವ ಅವಧಿ ಸಾಲಗಳ ಮಾಸಿಕ ಸಮಾನ ಕಂತು (ಇಎಂಐ) ಪಾವತಿ ಮುಂದೂಡಿಕೆ ನಿರ್ಧಾರದ ದುರುಪಯೋಗ ಪಡೆದುಕೊಂಡು ಗ್ರಾಹಕರನ್ನು ವಂಚಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಬ್ಯಾಂಕ್‌ಗಳು ಗ್ರಾಹಕರಿಗೆ ಸೂಚನೆ ನೀಡಿವೆ.

‘ಇಎಂಐ’ ಮುಂದೂಡಿಕೆ ಯೋಜ ನೆಯ ಹೆಸರಿನಲ್ಲಿ, ಬ್ಯಾಂಕ್‌ ಅಧಿಕಾರಿ ಎಂದು ಹೇಳಿಕೊಂಡುಯಾರಾದರೂ ಕರೆ ಮಾಡಿನಿಮ್ಮ ಮೊಬೈಲ್‌ ಸಂಖ್ಯೆಗೆ ಬಂದಿರುವ ಒಂದು ಬಾರಿಯ ರಹಸ್ಯ ಸಂಖ್ಯೆ ( ಒಟಿಪಿ) ಹಂಚಿಕೊಳ್ಳುವಂತೆ ಕೇಳಿದರೆ ಅದಕ್ಕೆ ಪ್ರತಿಕ್ರಿಯೆ ನೀಡಬೇಡಿ ಎಂದು ಎಸ್‌ಬಿಐ, ಆ್ಯಕ್ಸಿಸ್‌ ಬ್ಯಾಂಕ್‌ ಒಳಗೊಂಡು ಪ್ರಮುಖ ಬ್ಯಾಂಕ್‌ಗಳು ಗ್ರಾಹಕರಿಗೆ ಎಚ್ಚರಿಕೆ ನೀಡಿವೆ.

ಈ ಕುರಿತು ಎಸ್‌ಎಂಎಸ್‌ ಮತ್ತು ಇ–ಮೇಲ್‌ ಕಳುಹಿಸುವ ಮೂಲಕ ಗ್ರಾಹಕರಿಗೆ ತಿಳಿವಳಿಕೆ ಮೂಡಿಸುತ್ತಿವೆ.

ADVERTISEMENT

ಯಾವುದೇ ಕಾರಣಕ್ಕೂ ಬ್ಯಾಂಕಿಂಗ್‌ ವಹಿವಾಟಿಗೆ ಸಂಬಂಧಿಸಿದ ಒಟಿಪಿ, ಡೆಬಿಟ್‌ ಕಾರ್ಡ್‌ ಹಿಂಭಾಗದಲ್ಲಿ ಇರುವ ಮೂರು ಸಂಖ್ಯೆ (ಸಿವಿವಿ), ಕಾರ್ಡ್‌ನ ಪಿನ್, ಆನ್‌ಲೈನ್ ಬ್ಯಾಂಕಿಂಗ್‌ನ ಪಾಸ್‌ವರ್ಡ್‌ ಅಥವಾ ಪಿನ್‌ ಅನ್ನು ಯಾರೊಂದಿಗೂ ಹಂಚಿಕೊಳ್ಳದಿರಿ ಎಂದು ಸ್ಪಷ್ಟ ಸೂಚನೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.