ಇಪಿಎಫ್‌ಒ
ನವದೆಹಲಿ: ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) ಹೊಸದಾಗಿ 13.41 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸೇರ್ಪಡೆಯಾದವರ ಪ್ರಮಾಣದಲ್ಲಿ ಶೇ 16ರಷ್ಟು ಏರಿಕೆಯಾಗಿದೆ ಎಂದು ಇಪಿಎಫ್‌ಒ ತಿಳಿಸಿದೆ.
ರಾಜ್ಯವಾರು ಪೈಕಿ ಸದಸ್ಯರ ಸೇರ್ಪಡೆಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದು, ಶೇ 22ರಷ್ಟು ಪಾಲನ್ನು ಹೊಂದಿದೆ. ಕರ್ನಾಟಕ, ತಮಿಳುನಾಡು, ದೆಹಲಿ, ಹರಿಯಾಣ, ತೆಲಂಗಾಣ ಮತ್ತು ಗುಜರಾತ್‌ನಲ್ಲಿ ಹೆಚ್ಚು ಸದಸ್ಯರು ಸೇರ್ಪಡೆಯಾಗಿದ್ದಾರೆ.
ಉದ್ಯೋಗಾವಕಾಶ ಹೆಚ್ಚಳ, ಅನುಕೂಲಗಳ ಕುರಿತು ಉದ್ಯೋಗಿಗಳಲ್ಲಿ ಹೆಚ್ಚಿದ ಜಾಗೃತಿ ಮತ್ತು ಇಪಿಎಫ್‌ಒ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದಿಂದ ಸದಸ್ಯರ ಸಂಖ್ಯೆ ಏರಿಕೆಯಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.
ಅಂಕಿ ಅಂಶ
58% : ಹೊಸ ಸದಸ್ಯರಲ್ಲಿ 18ರಿಂದ 25ರ ವಯೋಮಾನದವರ ಪ್ರಮಾಣ
5.43 ಲಕ್ಷ : ಹೊಸ ಸದಸ್ಯರಲ್ಲಿ 18ರಿಂದ 25ರ ವಯೋಮಾನದವರ ಸಂಖ್ಯೆ
2.09 ಲಕ್ಷ : ಹೊಸ ಸದಸ್ಯರ ಪೈಕಿ 2.09 ಲಕ್ಷ ಮಹಿಳೆಯರ ಸಂಖ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.