ADVERTISEMENT

EPFO ಶೇ 8.25ರಷ್ಟು ಬಡ್ಡಿ: ಸಿಬಿಟಿ

ಪಿಟಿಐ
Published 2 ಮಾರ್ಚ್ 2026, 15:57 IST
Last Updated 2 ಮಾರ್ಚ್ 2026, 15:57 IST
<div class="paragraphs"><p>ಪಿಂಚಣಿ ನಿಧಿ:</p></div>

ಪಿಂಚಣಿ ನಿಧಿ:

   

ನವದೆಹಲಿ: ನೌಕರರ ಭವಿಷ್ಯನಿಧಿ ಸಂಘಟನೆಯು (ಇಪಿಎಫ್‌ಒ) ಭವಿಷ್ಯ ನಿಧಿ ಠೇವಣಿಗಳಿಗೆ 2025–26ನೇ ಸಾಲಿಗೆ ಶೇಕಡ 8.25ರಷ್ಟು ಬಡ್ಡಿ ನೀಡಲು ಸೋಮವಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಸಂಘಟನೆಯು ಹಿಂದಿನ ಆರ್ಥಿಕ ವರ್ಷದಲ್ಲಿಯೂ ಇದೇ ಪ್ರಮಾಣದ ಬಡ್ಡಿ ನೀಡಿತ್ತು.

ADVERTISEMENT

ಸೋಮವಾರ ನಡೆದ ಇಪಿಎಫ್‌ಒ ಕೇಂದ್ರೀಯ ಧರ್ಮದರ್ಶಿಗಳ ಸಭೆಯಲ್ಲಿ (ಸಿಬಿಟಿ) ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ವಿವರಿಸಿವೆ.

ಸಿಬಿಟಿ ತೀರ್ಮಾನವನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಅನುಮೋದನೆಗಾಗಿ ರವಾನಿಸಲಾಗುತ್ತದೆ. ಸರ್ಕಾರವು ಈ ತೀರ್ಮಾನಕ್ಕೆ ಒಪ್ಪಿಗೆ ನೀಡಿದ ನಂತರದಲ್ಲಿ, ಈ ಬಡ್ಡಿ ದರಕ್ಕೆ ಅನುಗುಣವಾಗಿ ಮೊತ್ತವನ್ನು ಪಿ.ಎಫ್‌ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.