ADVERTISEMENT

ಎಪ್ಸಿಲಾನ್‌ನಿಂದ ₹ 550 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 15:43 IST
Last Updated 27 ಸೆಪ್ಟೆಂಬರ್ 2022, 15:43 IST
   

ಬೆಂಗಳೂರು: ಕಾರ್ಬನ್ ಬ್ಲಾಕ್ ಉತ್ಪಾದಕ ಕಂಪನಿ ‘ಎಪ್ಸಿಲಾನ್ ಕಾರ್ಬನ್’ ವಿಜಯನಗರ ಜಿಲ್ಲೆಯಲ್ಲಿರುವ ತನ್ನ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಲು ₹ 550 ಕೋಟಿ ಹೂಡಿಕೆ ಮಾಡಲಿದೆ.

ವಿಜಯನಗರದಲ್ಲಿರುವ ಉತ್ಪಾದನಾ ಘಟಕದ ಸಾಮರ್ಥ್ಯಕ್ಕೆ ಹೆಚ್ಚುವರಿಯಾಗಿ 1 ಲಕ್ಷ ಟನ್ ಸೇರ್ಪಡೆ ಮಾಡಲು ಕಂಪನಿ ಮುಂದಾಗಿದೆ. ಇದರಿಂದಾಗಿ ಕಂಪನಿಯ ಕಾರ್ಬನ್ ಬ್ಲಾಕ್ ಉತ್ಪಾದನಾ ಸಾಮರ್ಥ್ಯವು 2.15 ಲಕ್ಷ ಟನ್‌ಗೆ ಏರಿಕೆ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.

‘2023–23ನೇ ಹಣಕಾಸು ವರ್ಷ ಕೊನೆಗೊಳ್ಳುವ ಮೊದಲು ಘಟಕದ ಸಾಮರ್ಥ್ಯ ವಿಸ್ತರಣೆ ಆಗಲಿದೆ’ ಎಂದು ಎಪ್ಸಿಲಾನ್ ಕಾರ್ಬನ್‌ನ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಹಂಡಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.