ಮುಂಬೈ: ದೇಶದ ಈಕ್ವಿಟಿ ಆಧರಿತ ಮ್ಯೂಚುವಲ್ ಫಂಡ್ (ಎಂ.ಎಫ್) ಮಾರುಕಟ್ಟೆಯಲ್ಲಿ ಬಂಡವಾಳದ ಒಳಹರಿವಿನ ಪ್ರಮಾಣವು ಡಿಸೆಂಬರ್‌ನಲ್ಲಿ ಶೇ 14ರಷ್ಟು ಏರಿಕೆಯಾಗಿದೆ.
ನವೆಂಬರ್‌ನಲ್ಲಿ ₹35,943 ಕೋಟಿ ಬಂಡವಾಳ ಹೂಡಿಕೆಯಾಗಿದ್ದರೆ, ಡಿಸೆಂಬರ್‌ನಲ್ಲಿ ₹41,156 ಕೋಟಿ ಹೂಡಿಕೆಯಾಗಿದೆ.
ಮ್ಯೂಚುವಲ್ ಫಂಡ್‌ನ ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಗುರುವಾರ ತಿಳಿಸಿದೆ.
ವ್ಯವಸ್ಥಿತ ಹೂಡಿಕೆ ಯೋಜನೆಯಡಿ (ಎಸ್‌ಐಪಿ) ನವೆಂಬರ್‌ನಲ್ಲಿ ₹25,320 ಕೋಟಿ ಹೂಡಿಕೆಯಾಗಿದ್ದರೆ, ಡಿಸೆಂಬರ್‌ನಲ್ಲಿ ₹26,459 ಕೋಟಿ ಹೂಡಿಕೆಯಾಗಿದೆ. ಎಸ್‌ಐಪಿ ಸಂಪತ್ತಿನ ನಿರ್ವಹಣಾ ಮೌಲ್ಯವು (ಎಯುಎಂ) ₹13.63 ಲಕ್ಷ ಕೋಟಿ ಮುಟ್ಟಿದೆ ಎಂದು ತಿಳಿಸಿದೆ.
ಮ್ಯೂಚುವಲ್ ಫಂಡ್ ಉದ್ಯಮದ ಒಟ್ಟಾರೆ ಎಯುಎಂ ₹66.93 ಲಕ್ಷ ಕೋಟಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.