ADVERTISEMENT

ಈಕ್ವಿಟಿ ಮ್ಯೂಚುವಲ್ ಫಂಡ್‌: ಜೂನ್‌ನಲ್ಲಿ ₹ 15,498 ಕೋಟಿ ಹೂಡಿಕೆ

ಪಿಟಿಐ
Published 8 ಜುಲೈ 2022, 13:26 IST
Last Updated 8 ಜುಲೈ 2022, 13:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಜೂನ್‌ನಲ್ಲಿ ₹ 15,498 ಕೋಟಿ ಹೂಡಿಕೆ ಆಗಿದೆ. ಷೇರುಪೇಟೆ ಅಸ್ಥಿರವಾಗಿರುವ ಜೊತೆಗೆ ವಿದೇಶಿ ಬಂಡವಾಳವು ನಿರಂತರವಾಗಿ ಹೊರಹೋಗುತ್ತಿರುವ ನಡುವೆಯೇ ಈ ಪ್ರಮಾಣದ ಹೂಡಿಕೆ ಆಗಿದೆ. ಇದರಿಂದಾಗಿ ಸತತ 16ನೇ ತಿಂಗಳಿನಲ್ಲಿಯೂ ಬಂಡವಾಳ ಒಳಹರಿವು ಆದಂತಾಗಿದೆ.

ಮೇ ತಿಂಗಳಿನಲ್ಲಿ ₹ 18,529 ಕೋಟಿ ಹೂಡಿಕೆ ಆಗಿತ್ತು. ಇದಕ್ಕೆ ಹೋಲಿಸಿದರೆ ಜೂನ್‌ನಲ್ಲಿ ಹೂಡಿಕೆಯು ₹ 3,031 ಕೋಟಿಯಷ್ಟು ಕಡಿಮೆ ಆಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಶುಕ್ರವಾರ ಮಾಹಿತಿ ನೀಡಿದೆ.

ಹೂಡಿಕೆಗೆ ಸಂಬಂಧಿಸಿದಂತೆ ಸದ್ಯ ಇರುವ ಸವಾಲಿನ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸಿದ್ದಾರೆ. ಹೀಗಾಗಿ ಹೂಡಿಕೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ಸಾಲಪತ್ರ ವಿಭಾಗದಿಂದ ಜೂನ್‌ನಲ್ಲಿ ₹ 92,247 ಕೋಟಿ ಬಂಡವಾಳ ಹೊರಹೋಗಿದೆ. ಮೇ ತಿಂಗಳಲ್ಲಿ ₹ 32,722 ಕೋಟಿ ಬಂಡವಾಳ ಹಿಂದಕ್ಕೆ ಪಡೆಯಲಾಗಿತ್ತು.

ಒಟ್ಟಾರೆಯಾಗಿ ಮ್ಯೂಚುವಲ್ ಫಂಡ್‌ ಉದ್ಯಮದಿಂದ ಜೂನ್‌ನಲ್ಲಿ ₹ 69,853 ಕೋಟಿ ಬಂಡವಾಳ ಹಿಂದಕ್ಕೆ ಪಡೆಯಲಾಗಿದೆ. ಮೇ ತಿಂಗಳಿನಲ್ಲಿ ₹ 7,532 ಕೋಟಿ ಹಿಂದಕ್ಕೆ ಪಡೆಯಲಾಗಿತ್ತು.

ದೀರ್ಘಾವಧಿಯಲ್ಲಿ ಈಕ್ಟಿಟಿ ಹೂಡಿಕೆಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಸಣ್ಣ ಹೂಡಿಕೆದಾರರಲ್ಲಿ ತಿಳಿವಳಿಕೆ ಮೂಡಿದೆ ಎನ್ನುವುದನ್ನು ಎಸ್‌ಐಪಿ ಅಂಕಿ–ಅಂಶಗಳು ಸೂಚಿಸುತ್ತಿವೆ ಎಂದು ಮೋತಿಲಾಲ್‌ ಓಸ್ವಾಲ್‌ ಎಎಂಸಿ ಮುಖ್ಯ ವಹಿವಾಟು ಅಧಿಕಾರಿ ಅಖಿಲ್‌ ಚತುರ್ವೇದಿ ಹೇಳಿದ್ದಾರೆ.

ಹೂಡಿಕೆ ವಿವರ (ಕೋಟಿಗಳಲ್ಲಿ)

ಎಸ್‌ಐಪಿ;₹ 12,276

ಫ್ಲೆಕ್ಸಿ–ಕ್ಯಾಪ್‌ ಫಂಡ್ಸ್‌;₹ 2,512

ಮಲ್ಟಿ–ಕ್ಯಾಪ್‌ ಫಂಡ್ಸ್‌;₹ 2,130

ಚಿನ್ನದ ಇಟಿಎಫ್‌;₹ 135

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.