ADVERTISEMENT

ಓಲೆಕ್ಟ್ರಾದಿಂದ ಇ.ವಿ. ಟ್ರಕ್ ಪರೀಕ್ಷಾರ್ಥ ಸಂಚಾರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 14:09 IST
Last Updated 17 ಏಪ್ರಿಲ್ 2022, 14:09 IST
ಓಲೆಕ್ಟ್ರಾ ಟ್ರಕ್
ಓಲೆಕ್ಟ್ರಾ ಟ್ರಕ್   

ಬೆಂಗಳೂರು: ವಿದ್ಯುತ್ ಚಾಲಿತ ಬಸ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಓಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್, ಅತ್ಯಾಧುನಿಕ ಮತ್ತು ಪ್ರಬಲ ಸಾಮರ್ಥ್ಯದ ವಿದ್ಯುತ್ ಚಾಲಿತ ಟ್ರಕ್‌ಗಳ ತಯಾರಿಕೆ ಆರಂಭಿಸಿದ್ದು, ಪರೀಕ್ಷಾರ್ಥ ಸಂಚಾರಕ್ಕೆ ಚಾಲನೆ ನೀಡಿದೆ.

ಮೆಘಾ ಎಂಜಿನಿಯರಿಂಗ್ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯ ಭಾಗವಾಗಿರುವ ಓಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್‌, 2015ರಿಂದ ದೇಶದಲ್ಲಿ ವಿದ್ಯುತ್ ಚಾಲಿತ ಬಸ್‌ಗಳ ಉತ್ಪಾದನೆಯಲ್ಲಿ ತೊಡಗಿದ್ದು, ಇದೀಗ ವಿದ್ಯುತ್ ಚಾಲಿತ ಟಿಪ್ಪರ್ ತಯಾರಿಕೆಯನ್ನೂ ಆರಂಭಿಸಿದೆ. ದೇಶದಲ್ಲೇ ಶಕ್ತಿಶಾಲಿಯಾದ ಇ.ವಿ. ಟಿಪ್ಪರ್ ಇದಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 220 ಕಿ.ಮೀ. ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

‘ಇಂಧನ ಬೆಲೆ ಏರಿಕೆಯ ಸಂದರ್ಭದಲ್ಲಿ ಈ ಟ್ರಕ್‌ಗಳು, ನಿರ್ಮಾಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ನಾಂದಿಯಾಗಲಿವೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ವೈಶಿಷ್ಟ್ಯಗಳನ್ನು ಹೊಂದಿವೆ’ ಎಂದು ಓಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್‌ನ ಅಧ್ಯಕ್ಷ ಕೆ.ವಿ. ಪ್ರದೀಪ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.