
ಪ್ರಜಾವಾಣಿ ವಾರ್ತೆ
ಬೆಂಗಳೂರು: ಮೈಸೂರು ಮೂಲದ ಎಕ್ಸೆಲ್‌ಸಾಫ್ಟ್ ಟೆಕ್ನಾಲಜೀಸ್ ಕಂಪನಿಯ ಸಾರ್ವಜನಿಕ ಷೇರು ಮಾರಾಟ (ಐಪಿಒ) ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದೆ.
ಪ್ರತಿ ಈಕ್ವಿಟಿ ಷೇರಿನ ಬೆಲೆಯನ್ನು ₹114ರಿಂದ ₹120ಕ್ಕೆ ನಿಗದಿಪಡಿಸಲಾಗಿದೆ. ಐಪಿಒಗೆ ಬಿಡ್ ಸಲ್ಲಿಸಲು ಶುಕ್ರವಾರ (ನವೆಂಬರ್ 21) ಕೊನೆಯ ದಿನ ಎಂದು ಕಂಪನಿ ತಿಳಿಸಿದೆ.
ಕಂಪನಿಯು ಐಪಿಒ ಮೂಲಕ ₹500 ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಈಗಾಗಲೇ ಆರಂಭಿಕ ಹೂಡಿಕೆದಾರರಿಂದ (ಆ್ಯಂಕರ್ ಇನ್‌ವೆಸ್ಟರ್ಸ್) ₹150 ಕೋಟಿ ಸಂಗ್ರಹಿಸಿದೆ.
ಎಕ್ಸೆಲ್‌ಸಾಫ್ಟ್ ಒಂದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ಸೇವೆ ಒದಗಿಸುವ ಕಂಪನಿ ಆಗಿದ್ದು, 2000ರಲ್ಲಿ ಸ್ಥಾಪನೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.