ADVERTISEMENT

ರೆಪೊ ದರ ಹೆಚ್ಚಳ: ದಾಸ್ ಸುಳಿವು

ಪಿಟಿಐ
Published 23 ಮೇ 2022, 14:17 IST
Last Updated 23 ಮೇ 2022, 14:17 IST

ನವದೆಹಲಿ (ಪಿಟಿಐ): ಹಣದುಬ್ಬರವನ್ನು ಕಡಿಮೆ ಮಾಡಲು ಜೂನ್‌ನಲ್ಲಿ ರೆಪೊ ದರವನ್ನು ಮತ್ತೆ ಹೆಚ್ಚಿಸುವ ಸೂಚನೆಯನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೀಡಿದ್ದಾರೆ.

‘ದರ ಹೆಚ್ಚಾಗುತ್ತದೆ ಎಂಬುದನ್ನು ಹೇಳಲು ಬುದ್ಧಿವಂತಿಕೆ ಬೇಕಾಗಿಲ್ಲ. ರೆಪೊ ಏರಿಕೆ ಆಗುತ್ತದೆ. ಆದರೆ ಎಷ್ಟು ಎಂಬುದನ್ನು ಈಗಲೇ ಹೇಳಲಾರೆ’ ಎಂದು ದಾಸ್ ಅವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಹಣದುಬ್ಬರ ತಗ್ಗಿಸಲು ಆರ್‌ಬಿಐ ಮತ್ತು ಸರ್ಕಾರ ಜೊತೆಯಾಗಿ ಮತ್ತೊಂದು ಸುತ್ತಿನ ಕೆಲಸ ಆರಂಭಿಸಿವೆ ಎಂದು ತಿಳಿಸಿದ್ದಾರೆ. ‘ಇಂದು ಬಹುತೇಕ ದೇಶಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿ ದರವು ಹಣದುಬ್ಬರ ಪ್ರಮಾಣಕ್ಕಿಂತ ಕಡಿಮೆ ಇದೆ. ಬಡ್ಡಿ ದರಕ್ಕಿಂತ ಹಣದುಬ್ಬರ ಕಡಿಮೆ ಆಗುವ ಸಂದರ್ಭ ಬರುತ್ತದೆ. ಎಷ್ಟು ಬೇಗ ಅದು ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ’ ಎಂದು ದಾಸ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.