ADVERTISEMENT

ರಫ್ತು ವಲಯಕ್ಕೆ ₹2,900 ಕೋಟಿ ಸಾಲ

ಕರ್ಣಾಟಕ ಬ್ಯಾಂಕ್‌ ಸಿಇಒ ಮಹಾಬಲೇಶ್ವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2018, 16:59 IST
Last Updated 21 ಜೂನ್ 2018, 16:59 IST
   

ಮಂಗಳೂರು: ಈ ಆರ್ಥಿಕ ವರ್ಷದಲ್ಲಿ ರಫ್ತು ವಹಿವಾಟು ಪ್ರಗತಿಯ ಹಾದಿಯಲ್ಲಿ ಸಾಗಲಿರುವುದರಿಂದಈ ವಲಯಕ್ಕೆ ₹2,900 ಕೋಟಿ ಸಾಲ ನೀಡುವ ಗುರಿ ಹಾಕಿಕೊಂಡಿದೆ’ ಎಂದು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್‌. ಹೇಳಿದ್ದಾರೆ.

ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ವಿದೇಶಿ ವಿನಿಮಯ ವಹಿವಾಟು ಸಮಾವೇಶದಲ್ಲಿ ಅವರು ಮಾತನಾಡಿದರು. ‘ದೇಶಿ ರಫ್ತು ವಲಯ ನಿರೀಕ್ಷಿತ ಪ್ರಮಾಣದಲ್ಲಿ ಅಲ್ಲದಿದ್ದರೂ ಸಕಾರಾತ್ಮಕ ಬೆಳವಣಿಗೆಯತ್ತ ಹೆಜ್ಜೆ ಇಟ್ಟಿದೆ. ರಫ್ತು ಕ್ಷೇತ್ರಕ್ಕೆ ಅಗತ್ಯವಾಗಿರು ಎಲ್ಲ ಸಹಕಾರವನ್ನು ಬ್ಯಾಂಕ್ನೀಡಲಿದೆ.

ಕಳೆದ ವರ್ಷಕ್ಕಿಂತಶೇ 20.82 ರಷ್ಟು ಹೆಚ್ಚುವರಿ ಸಾಲ ನೀಡಲು ನಿರ್ಧರಿಸಲಾಗಿದೆ. ಉದ್ಯಮದ ಬೆಳವಣಿಗೆಗೆ ಪೂರಕವಾಗಿ ಬ್ಯಾಂಕ್‌ ಈ ನಿರ್ಧಾರ ಕೈಗೊಂಡಿದೆ’ ಎಂದರು.

ADVERTISEMENT

ಬ್ಯಾಂಕಿನ 26 ವಿದೇಶಿ ವಿನಿಮಯ ಶಾಖೆಯ ಮುಖ್ಯಸ್ಥರು, 12 ಪ್ರಾದೇಶಿಕ ಕಚೇರಿ ಮುಖ್ಯಸ್ಥರು, ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.