ನವದೆಹಲಿ: ಜೂನ್ ತಿಂಗಳಲ್ಲಿ ಭಾರತದ ರಫ್ತು ವಹಿವಾಟಿನಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಜೂನ್‌ನಲ್ಲಿ ಭಾರತದ ರಫ್ತು ವಹಿವಾಟಿನ ಮೊತ್ತ ₹ 3 ಲಕ್ಷ ಕೋಟಿ (35.14 ಬಿಲಿಯನ್ ಡಾಲರ್) ಆಗಿದೆ. ಹಿಂದಿನ ವರ್ಷದ ಜೂನ್ ತಿಂಗಳಲ್ಲಿಯೂ ರಫ್ತು ವಹಿವಾಟಿನ ಮೊತ್ತವು ಸರಿಸುಮಾರು ಇಷ್ಟೇ ಇತ್ತು (35.16 ಬಿಲಿಯನ್ ಡಾಲರ್).
ಆದರೆ ಆಮದು ವಹಿವಾಟಿನಲ್ಲಿ ತುಸು ಇಳಿಕೆ ಕಂಡುಬಂದಿದೆ. ಈ ವರ್ಷದ ಜೂನ್‌ನಲ್ಲಿ ₹4.63 ಲಕ್ಷ ಕೋಟಿ (53.92 ಬಿಲಿಯನ್ ಡಾಲರ್) ಮೌಲ್ಯದ ಆಮದು ವಹಿವಾಟು ನಡೆದಿದೆ. ಕಚ್ಚಾ ತೈಲ ಹಾಗೂ ಚಿನ್ನದ ಆಮದು ತಗ್ಗಿದ ಪರಿಣಾಮವಾಗಿ ಒಟ್ಟಾರೆ ಆಮದು ವಹಿವಾಟಿನ ಮೌಲ್ಯದಲ್ಲಿ ಇಳಿಕೆ ಕಂಡುಬಂದಿದೆ.
ಕಚ್ಚಾ ತೈಲದ ಆಮದು ಶೇ 8.37ರಷ್ಟು ಹಾಗೂ ಚಿನ್ನದ ಆಮದು ಶೇ 25.73ರಷ್ಟು ಕಡಿಮೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.