ADVERTISEMENT

ಮೇ ತಿಂಗಳ ಮೊದಲ ವಾರದಲ್ಲಿ ರಫ್ತು ಶೇ 80ರಷ್ಟು ಹೆಚ್ಚಳ

ಪಿಟಿಐ
Published 9 ಮೇ 2021, 14:53 IST
Last Updated 9 ಮೇ 2021, 14:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ದೇಶದ ರಫ್ತು ವಹಿವಾಟು ಹಿಂದಿನ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮೇ ತಿಂಗಳ ಮೊದಲ ವಾರದಲ್ಲಿ ಶೇಕಡ 80ರಷ್ಟು ಏರಿಕೆ ದಾಖಲಿಸಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಿದೆ.

ಮೌಲ್ಯದ ಲೆಕ್ಕದಲ್ಲಿ 2021ರ ಮೇ ತಿಂಗಳ ಮೊದಲ ವಾರದಲ್ಲಿ ರಫ್ತು ವಹಿವಾಟು ₹ 52,096 ಕೋಟಿಗಳಷ್ಟಾಗಿದೆ. ‌2020ರ ಮೇ ತಿಂಗಳ ಮೊದಲ ವಾರದಲ್ಲಿ ₹ 28,934 ಕೋಟಿ ಮೌಲ್ಯದ ರಫ್ತು ವಹಿವಾಟು ನಡೆದಿತ್ತು.

ಆಮದು ವಹಿವಾಟು ಸಹ ಶೇ 80.7ರಷ್ಟು ಏರಿಕೆಯಾಗಿದ್ದು ₹ 65,564 ಕೋಟಿಗೆ ತಲುಪಿದೆ. ರಫ್ತು ವಹಿವಾಟು 2020ರ ಏಪ್ರಿಲ್‌ಗೆ ಹೋಲಿಸಿದರೆ 2021ರ ಏಪ್ರಿಲ್‌ನಲ್ಲಿ ಮೂರು ಪಟ್ಟು ಹೆಚ್ಚಾಗಿ ₹ 2.23 ಲಕ್ಷ ಕೋಟಿಗೆ ತಲುಪಿದೆ.

ADVERTISEMENT

ಹರಳು ಮತ್ತು ಚಿನ್ನಾಭರಣ, ಸೆಣಬು, ಕರಕುಶಲ ವಸ್ತುಗಳು, ಚರ್ಮದ ಉತ್ಪನ್ನಗಳು, ಎಲೆಕ್ಟ್ರಾನಿಕ್ ಸರಕುಗಳು, ಗೋಡಂಬಿ, ಎಂಜಿನಿಯರಿಂಗ್, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಾಸಾಯನಿಕಗಳ ರಫ್ತು ಸಕಾರಾತ್ಮಕ ಮಟ್ಟದಲ್ಲಿದೆ.

ರಫ್ತು ವಹಿವಾಟಿನ ಬೆಳವಣಿಗೆಯು ಉತ್ತೇಜನಕಾರಿ ಆಗಿದ್ದು, ಬೇಡಿಕೆಯು ಸಹ ಆರೋಗ್ಯಕರ ಮಟ್ಟದಲ್ಲಿದೆ ಎಂದು ಭಾರತೀಯ ರಫ್ತುದಾರರ ಸಂಘಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಎಸ್‌.ಕೆ. ಸರಫ್‌ ಹೇಳಿದ್ದಾರೆ.

ಭಾರತದ ಸರಕುಗಳ ರಫ್ತು ಯೋಜನೆಯಲ್ಲಿ (ಎಂಇಐಎಸ್‌) ಇರುವ ಸಮಸ್ಯೆಗಳನ್ನು ಪರಿಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.