ADVERTISEMENT

ಎಫ್‌ಡಿಐ ಒಳಹರಿವು ಶೇ 16 ಇಳಿಕೆ

ಪಿಟಿಐ
Published 24 ಮೇ 2023, 16:18 IST
Last Updated 24 ಮೇ 2023, 16:18 IST
ಎಫ್‌ಡಿಐ
ಎಫ್‌ಡಿಐ   

ನವದೆಹಲಿ : 2022–23ರಲ್ಲಿ ದೇಶಕ್ಕೆ ಬಂದ ಒಟ್ಟು ವಿದೇಶಿ ನೇರ ಬಂಡವಾಳದ (ಎಫ್‌ಡಿಐ) ಮೊತ್ತವು 2021–22ರಲ್ಲಿ ಬಂದ ಮೊತ್ತಕ್ಕೆ ಹೋಲಿಸಿದರೆ ಶೇಕಡ 16.3ರಷ್ಟು ಕಡಿಮೆ ಆಗಿದೆ. ಎಫ್‌ಡಿಐ ವಾರ್ಷಿಕ ಒಳಹರಿವು ದಶಕದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ಆಗಿದೆ.

ಜಾಗತಿಕವಾಗಿ ಅರ್ಥ ವ್ಯವಸ್ಥೆಯು ಮಂದಗತಿಯಲ್ಲಿ ಇದ್ದುದರ ಕಾರಣದಿಂದ ಈ ರೀತಿ ಆಗಿದೆ ಎಂದು ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ. 2012–13ರಲ್ಲಿ ಎಫ್‌ಡಿಐ ಒಳಹರಿವು ಶೇ 26ರಷ್ಟು ಕಡಿಮೆ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT