ADVERTISEMENT

ಈಕ್ವಿಟಿ ಎಫ್‌ಡಿಐ: ಏಪ್ರಿಲ್‌–ಜೂನ್‌ ಅವಧಿಯಲ್ಲಿ ಶೇ 6 ಇಳಿಕೆ

ಪಿಟಿಐ
Published 1 ಸೆಪ್ಟೆಂಬರ್ 2022, 12:51 IST
Last Updated 1 ಸೆಪ್ಟೆಂಬರ್ 2022, 12:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಈಕ್ವಿಟಿಗಳಲ್ಲಿ ಆಗಿರುವ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) ಶೇ 6ರಷ್ಟು ಇಳಿಕೆ ಕಂಡಿದ್ದು, ₹1.32 ಲಕ್ಷ ಕೋಟಿ ಆಗಿದೆ ಎಂದು ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆ (ಡಿಪಿಐಐಟಿ) ಹೇಳಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಈಕ್ವಿಟಿಗಳಲ್ಲಿ ₹1.39 ಲಕ್ಷ ಕೋಟಿ ಹೂಡಿಕೆ ಆಗಿತ್ತು. ಒಟ್ಟಾರೆ ಎಫ್‌ಡಿಐ ಒಳಹರಿವು ₹1.79 ಲಕ್ಷ ಕೋಟಿಯಿಂದ ₹1.77 ಲಕ್ಷ ಕೋಟಿಗೆ ಇಳಿಕೆ ಆಗಿದೆ.

ಅತಿ ಹೆಚ್ಚು ಹೂಡಿಕೆ ಮಾಡಿರುವ ದೇಶಗಳ ಸಾಲಿನಲ್ಲಿ ಸಿಂಗಪುರ ಮೊದಲ ಸ್ಥಾನದಲ್ಲಿದೆ. ಮಾರಿಷಸ್‌, ಯುಎಇ, ಯುಎಸ್‌ಎ, ನೆದರ್ಲೆಂಡ್ಸ್‌ ಮತ್ತು ಜಪಾನ್‌ ನಂತರದ ಸ್ಥಾನದಲ್ಲಿವೆ.

ADVERTISEMENT

ಕಂಪ್ಯೂಟರ್‌ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ವಲಯದಲ್ಲಿ ಗರಿಷ್ಠ ₹27,860 ಕೋಟಿ ಹೂಡಿಕೆ ಆಗಿದೆ. ಸೇವೆಗಳ ವಲಯದಲ್ಲಿ ₹20,696 ಕೋಟಿ ಹೂಡಿಕೆ ಆಗಿದೆ. ರಾಸಾಯನಿಕ, ವಾಹನ ಉದ್ಯಮ, ಮೂಲಸೌಕರ್ಯ ಚಟುವಟಿಕೆಗಳ ಮೇಲೆಯೂ ಬಂಡವಾಳ ಹೂಡಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.