ADVERTISEMENT

6 ವರ್ಷಗಳ ಬಳಿಕ ಎಫ್‌ಡಿಐ ಇಳಿಕೆ

ದೂರಸಂಪರ್ಕ, ಔಷಧ ವಲಯದಲ್ಲಿ ತಗ್ಗಿದ ಹೂಡಿಕೆ

ಪಿಟಿಐ
Published 28 ಮೇ 2019, 18:34 IST
Last Updated 28 ಮೇ 2019, 18:34 IST
   

ನವದೆಹಲಿ: ಆರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ2018–19ರಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಶೇ 1ರಷ್ಟು ಇಳಿಕೆಯಾಗಿದೆ.

2017–18ರಲ್ಲಿ₹ 3.13 ಲಕ್ಷ ಕೋಟಿ ಎಫ್‌ಡಿಐ ಹರಿದುಬಂದಿತ್ತು. 2018–19ರಲ್ಲಿ₹ 3.10 ಲಕ್ಷ ಕೋಟಿ
ಗಳಷ್ಟಿದೆ ಎಂದು ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಮಂಡಳಿ (ಡಿಪಿಐಐಟಿ) ಮಾಹಿತಿ ನೀಡಿದೆ.

ಈ ಹಿಂದೆ 2012–13ರಲ್ಲಿ ಎಫ್‌ಡಿಐ ಒಳಹರಿವು ಶೇ 36ರಷ್ಟು ಕಡಿಮೆಯಾಗಿ ₹ 1.56 ಲಕ್ಷ ಕೋಟಿಗಳಷ್ಟಿತ್ತು. ಆ ಬಳಿಕ ಒಳಹರಿವು ಏರುಮುಖವಾಗಿದ್ದು, 2017–18ರಲ್ಲಿ ಗರಿಷ್ಠ ಮಟ್ಟವನ್ನು ತಲುಪಿತ್ತು.

ADVERTISEMENT

ಏರಿಕೆ: ಸೇವೆಗಳು, ಕಂಪ್ಯೂಟರ್‌ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಮತ್ತು ವಾಹನ ಉದ್ಯಮ ವಲಯಗಳಲ್ಲಿ ಹೂಡಿಕೆ ಹೆಚ್ಚಾಗಿದೆ.

ಇಳಿಕೆ: ದೂರಸಂಪರ್ಕ, ನಿರ್ಮಾಣ, ಔಷಧ ಮತ್ತು ವಿದ್ಯುತ್‌ ವಲಯಗಳಲ್ಲಿ ಎಫ್‌ಡಿಐ ಒಳಹರಿವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಎಫ್‌ಡಿಐ ಒಳಹರಿವಿನಲ್ಲಿ ಹೆಚ್ಚಳ ಬಹಳ ಮುಖ್ಯವಾಗಿದೆ. ಒಳಹರಿವು ಕಡಿಮೆಯಾದರೆ ದೇಶದ ಅಂತರರಾಷ್ಟ್ರೀಯ ಪಾವತಿ ಮೇಲೆ ಪರಿಣಾಮ ಬೀರಲಿದೆ. ರೂಪಾಯಿ ಮೌಲ್ಯದಲ್ಲಿ ವ್ಯತ್ಯಯಕ್ಕೂ ಕಾರಣವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.